ಗಂಗೊಳ್ಳಿಯಲ್ಲಿ ಈದ್ ಉಲ್ ಅಝ್ಹಾ ಸಂಭ್ರಮ: ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿ ಹಬ್ಬ ಆಚರಣೆ

ಕುಂದಾಪುರ: ತ್ಯಾಗ ಬಲಿದಾನದ ಸಂಕೇತದ ಹಬ್ಬವಾದ ಈದ್ ಉಲ್ ಅಝ್ಹಾ
ವಿಶೇಷ ನಮಾಜ್ ನಲ್ಲಿ  ಗಂಗೊಳ್ಳಿ ಮುಸ್ಲಿಂ ಬಾಂಧವರು ಸೋಮವಾರ  ಸಂಭ್ರಮದಿಂದ ಪಾಲ್ಗೊಂಡರು.
ಗಂಗೊಳ್ಳಿ ಮಸೀದಿ,  ಕೇಂದ್ರ ಜುಮ್ಮಾ ಮಸೀದಿ, ಮೌಲಾನಾ ಮುಝಮ್ಮಿಲ್ ನದ್ವಿ  ಮೋಹಿಯುದ್ದೀನ್ ಜುಮ್ಮಾ ಮಸೀದಿ, ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ ಶಾಹಿ ಜುಮ್ಮಾ ಮಸೀದಿ, ಮೌಲಾನಾ ಅಬ್ದುಲ್ ಮತೀನ್ ಸಿದ್ದಿಕಿ  ಸಲಫಿ ಮಸೀದಿಯಲ್ಲಿ ಮೌಲಾನಾ ತೌಫಿಕ್ ಉಮರಿ ಈದ್ ಖುದುಬ ಹಾಗೂ ನಮಾಜ್ ನೆರವೇರಿಸಿದರು. ಪರಸ್ಪರ ಆಲಿಂಗನಗೈದು ಈದ್ ಶುಭಾಶಯ ಹಂಚಿಕೊಂಡ ಮುಸ್ಲಿಂ ಭಾಂದವರು  ಅಗಲಿದವರ ಗೋರಿಗಳ ಬಳಿ ತೆರಳಿ ಪ್ರಾರ್ಥಿಸಿದರು.

ಹಬ್ಬದ ಸಂಭ್ರಮದಲ್ಲೂ ಮಾನವೀಯತೆ ಮೆರೆದ ಮುಸ್ಲಿಮರು:
ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸುತ್ತಿದ ಪಿಎಫ್ಐ ಸಂಘಟನೆಯ ಸದಸ್ಯರು  ಹಬ್ಬದ ಸಂದರ್ಭದಲ್ಲಿ ನೆರೆ ಸಂತ್ರಸ್ತರನ್ನು ನೆನಪಿಸಿಕೊಂಡರು.
ಗುಂಪು ಹತ್ಯೆಗಳ ವಿರುದ್ದ ಬ್ಯಾಡ್ಜ್ ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.ಗಂಗೊಳ್ಳಿ ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಬಿಗಿ ಬಂದೋಬಸ್ತು ಮಾಡಲಾಗಿತ್ತು.