ಉಡುಪಿ, ಮೇ 3: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿರ್ಬಂದಾಜ್ಞೆ ಜ್ಯಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಆಥವಾ ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವುದಕ್ಕೆ ನಿರ್ಬಂಧಗಳಿವೆ, ಅಲ್ಲದೇ ಈ ಬಗ್ಗೆ ಸಾರ್ವತ್ರಿಕವಾದ ಅನುಮತಿ ಇರುವುದಿಲ್ಲ, ಕೇವಲ ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಹೋಗ ಬೇಕಾದಲ್ಲಿ ಆಥವಾ ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕ, Defence Production ಮುಂತಾದ ಅಗತ್ಯ ಕರ್ತವ್ಯಕ್ಕೆ (Essential Services Sector) ಹಾಜರಾಗಲು ಅಂತರ್ ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಅರ್ಜಿಯನ್ನು ವೈದ್ಯಕೀಯ ಪ್ರಮಾಣ ಪತ್ರ, ಅಗತ್ಯ ಸೇವೆಗಳಾದಲ್ಲಿ ಐಡಿ ಕಾರ್ಡ್, ಸಂಸ್ಥೆಯು ಕಳುಹಿಸಿರುವ ಪತ್ರ ಮುಂತಾದ ದಾಖಲೆಗಳೊಂದಿಗೆ ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿದೆ.
ಹೀಗೆ ಸಲ್ಲಿಸಲಾದ ಕೋರಿಕೆಗಳನ್ನು ಅನ್ಲೈನ್ ಮುಖಾಂತರ ತಹಶೀಲ್ದಾರು ಪರಿಶೀಲಿಸಿ ಅನುಮೋದನೆಗಾಗಿ ಅಪರ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಾರೆ. ಅವರು ಅನ್ಲೈನ್ ಕೋರಿಕೆಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ.
ಆದರೂ ಸಹ ಸಾರ್ವಜನಿಕರು ಅನುಮತಿಗಾಗಿ ಜಿಲ್ಲಾಧಿಕಾರಿಯವರ ಕಛೇರಿಗೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ರೀತಿ ಅನುಮತಿಗಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಛೇರಿಗೆ ಗುಂಪು ಗುಂಪು ಆಗಿ ಬರುವುದು ನಿರ್ಬಂಧ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಆದ್ದರಿಂದ ಮೇಲಿನ ಎರಡು ಉದ್ದೇಶಕ್ಕೆ ಪ್ರಯಾಣಿಸಬೇಕಾದ ಸಾರ್ವಜನಿಕರು ಇನ್ನು ಮುಂದೆ ಜಿಲ್ಲಾಧಿಕಾರಿಯವರ ಕಛೇರಿಗೆ ಅಲೆದಾಡದೆ ನೇರವಾಗಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಮೂಲಕ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು E-PASS ಮೂಲಕ ಪಡೆಯಲು ತಿಳಿಸಲಾಗಿದೆ.
ಮೇ 2 ರಲ್ಲಿನ ಸರ್ಕಾರದ ಅದೇಶದಂತೆ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಲಾಕ್ಡೌನ್ ನಿಂದಾಗಿ ನಿರ್ಬಂದಿಸಲ್ಪಟ್ಟು ಹೊರ ಜಿಲ್ಲೆಗೆ ಹೋಗಬೇಕಾದ ವ್ಯಕ್ತಿಗಳು (stranded persons) “one-
time one-day one-way pass” ನ್ನು ಜಿಲ್ಲಾಧಿಕಾರಿಗಳಿಂದ ಪಡೆಯಲು ಸಂಬಂಧಪಟ್ಟ ತಹಶೀಲ್ದಾರರ ಮುಖಾಂತರ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.