ಬೆಂಗಳೂರು : ರಾಜ್ಯದಲ್ಲಿ 2023ನೇ ಸಾಲಿನ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪ್ರಕಟಗೊಳಿಸಲಾಗಿದೆ. ಮೇ 22 ರಿಂದ ಜೂನ್ 2 ರವರೆಗೆ ಪೂರಕ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.
ಈ ವರ್ಷದಿಂದ ದ್ವಿತೀಯ ಪಿಯು ಪರೀಕ್ಷೆ ನಡೆಸುತ್ತಿರುವ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಂಗಳವಾರ ಬಿಡುಗಡೆ ಮಾಡಿದೆ. ಮೇ 22 ರಿಂದ ಪೂರಕ ಪರೀಕ್ಷೆ ಆರಂಭವಾಗಲಿದ್ದು, 20 ದಿನಗಳ ಮುಂಚೆಯೇ ಪರೀಕ್ಷಾರ್ಥಿಗಳಿಗೆ ದಿನಾಂಕವನ್ನು ಘೋಷಣೆ ಮಾಡಿದೆ. ಇನ್ನು ಪರೀಕ್ಷಾ ದಿನಾಂಕ ಮತ್ತು ವೇಳಾಪಟ್ಟಿಯ ಕುರಿತ ಹೆಚ್ಚಿನ ಮಾಹಿತೊಗಾಗಿ, ಪರೀಕ್ಷಾರ್ಥಿಗಳು https://kseab.karnataka.gov.in/ ವೆಬ್ಸೈಟ್ಗೆ ಭೇಟಿ ನೀಡಿ ವೇಳಾಪಟ್ಟಿ ಮಾಹಿತಿ ಪಡೆಯಬಹುದು.ಕೆಲವು ಪರೀಕ್ಷೆಗಳು ಬೆಳಗ್ಗೆ 10.15ರಿಂದ 1.30 ಹಾಗೂ ಮತ್ತೆ ಕೆಲವು ಪರೀಕ್ಷೆ ಮಧ್ಯಾಹ್ನ 2.15ರಿಂದ 5.30ರ ವರೆಗೆ ನಡೆಯಲಿದೆ.
- ಪೂರಕ ಪರೀಕ್ಷೆ ವೇಳಾಪಟ್ಟಿ ಹೀಗಿದೆ..
- ಮೇ 22- ಕನ್ನಡ, ಅರೇಬಿಕ್,
- ಮೇ 23- ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ,
- ಮೇ 24 – ಇಂಗ್ಲಿಷ್ (ಮಧ್ಯಾಹ್ನ- ಐಟಿ, ರೀಟೈಲ್, ಆಟೋ ಮೋಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ನೆಸ್),
- ಮೇ 25- ಸಮಾಜಶಾಸ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ,
- ಮೇ 26- ಇತಿಹಾಸ, ಸಂಖ್ಯಾಶಾಸ,
- ಮೇ 27- ಹಿಂದಿ (ಮಧ್ಯಾಹ್ನ-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್),
- ಮೇ 28- ರಜೆ,
- ಮೇ 29- ಭೂಗೋಳಶಾಸ, ಮನಃಶಾಸ್ತ್ರ, ಭೌತ ಶಾಸ್ತ್ರ,
- ಮೇ 30- ಭೂಗರ್ಭಶಾಸ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
- ಮೇ 31- ರಾಜ್ಯಶಾಸ, ಗಣಿತ ಶಾಸ್ತ್ರ,
- ಜೂ.1 ತರ್ಕಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ,
- ಜೂ.2- ಅರ್ಥಶಾಸ, ಜೀವಶಾಸ್ತ್ರ












