ಭಜರಂಗದಳವನ್ನು ನಿಷೇದಿಸುವ ಪ್ರಸ್ತಾಪವೇ ಇಲ್ಲ, ನಿಷೇಧಿಸಲು ಸಾಧ್ಯವೂ ಇಲ್ಲ: ಡಾ.ವೀರಪ್ಪ ಮೊಯಿಲಿ

ಉಡುಪಿ: ಭಜರಂಗದಳವನ್ನ ನಿಷೇಧಿಸುವ ಯಾವುದೇ ಪ್ರಸ್ತಾವನೆ ಕಾಂಗ್ರೆಸ್ ನಲ್ಲಿಲ್ಲ.ರಾಜ್ಯ ಸರಕಾರಕ್ಕೆ ಅಂತಹ ಸಂಘಟನೆಯನ್ನ ನಿಷೇಧಿಸುವ ಯಾವುದೇ ಹಕ್ಕು ಇರುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ವೀರಪ್ಪ ಮೊಯಿಲಿ ಅವರು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ಅವರು ಈ ಹೇಳಿಕೆ ನೀಡಿದರು. ವಲ್ಲಭಾಬಾಯಿ ಪಟೇಲ್ ಅವರನ್ನು ಬಿಜೆಪಿ ಈಗ ಆರಾಧನೆ ಮಾಡ್ತಾ ಇದೆ.ವಲ್ಲಭಾಬಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದ ವ್ಯಕ್ತಿ.ಆದರೆ ಅವರನ್ನು ನಿಷೇಧಿಸಿದ್ದನ್ನು ಜವಾಹರ್ ಲಾಲ್ ನೆಹರು ಅವರು ವಾಪಾಸ್ ಪಡೆದರು. ಸುಪ್ರೀಂ ಕೋರ್ಟ್ ದ್ವೇಷ […]

NATA ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಆರ್ಕಿಟೆಕ್ಚರ್‌ ಇಂಜಿನಿಯರಿಂಗ್‌ ಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಎಪ್ರಿಲ್‌ 2023 ರಲ್ಲಿ ನಡೆದ ಪ್ರಥಮ ಹಂತದ NATA ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ವರುಣ್‌ ಜಿ ನಾಯಕ್‌ 127, ದೀಕ್ಷಾ ಪಾಂಡು 123, ಸ್ಪರ್ಶ ಪಾರ್ಶ್ವನಾಥ್‌ 119, ಧರಿನಾಥ್‌ ಕುಂಬಾರ್‌ 118, ಸಹನಾ ಎನ್‌ ಸಿ 116 ಅಂಕ ಗಳಿಸಿದ್ದಾರೆ. NATA ಪರೀಕ್ಷೆಗೆ ಹಾಜರಾದ 31 ವಿದ್ಯಾರ್ತಿಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ವಿದ್ಯಾರ್ಥಿಗಳಾದ ಅನ್ವಿತಾ ಕೆ, ಸ್ವಸ್ತಿಕ್‌ ಕೆ ಭಟ್‌, ಅನುಷಾ […]

ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರು ಸಭ್ಯತೆ ಮೀರುತ್ತಿದ್ದಾರೆ: ವಿ.ಸುನೀಲ್ ಕುಮಾರ್

ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಿರುವ ಬೆಂಬಲಿಗರು ಸಾರ್ವಜನಿಕ ಸಭೆ, ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಯಕ್ತಿಕ ಟೀಕೆಗಳನ್ನು ಮಾಡುವುದು, ಕೀಳು ಮಟ್ಟದ ಪದ ಪ್ರಯೋಗಿಸುತ್ತಿರುವುದನ್ನು ಮಾಡುತ್ತಿದ್ದಾರೆ. ಈ ಎಲ್ಲ ನಡವಳಿಕೆಗಳು ಅನಾಗರಿಕ ಸಂಸ್ಕೃತಿಯಾಗಿದೆ. ಇಂತಹ ಸಭ್ಯತೆ ಮೀರಿದ ವರ್ತನೆ ಕಾರ್ಕಳದ ಗೌರವ ಕೆಡಿಸುವ ಯತ್ನವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿ ಸುನಿಲ್‌ಕುಮಾರ್ ಹೇಳಿದ್ದಾರೆ. ಹೇಳಿಕೆ ನೀಡಿರುವ ಅವರು, ಕಾರ್ಕಳದ ಜನ ಗೌರವದಿಂದ ಬದುಕಿ ಬಾಳಿದವರು ಇಂದಿಗೂ ಅದೇ ಬದುಕನ್ನು ಮುಂದವರೆಸುತ್ತಿದ್ದಾರೆ. ಮುಂದೆಯೂ ಅದನ್ನೆ ಬಯಸುವರು. ಗೌರವದ […]

ಕ್ರಿಯೇಟಿವ್‌ ನ ಮೂರು ವಿದ್ಯಾರ್ಥಿಗಳು ಎನ್‌ ಡಿ ಎ ಗೆ ಆಯ್ಕೆ

ಕೇಂದ್ರ ಲೋಕಸೇವಾ ಆಯೋಗ (UPSC) ಎಪ್ರಿಲ್‌ 16, 2023 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ ರಾಷ್ಟ್ರಮಟ್ಟದ ಎನ್‌.ಡಿ.ಎ/ಎನ್‌.ಎ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ 03 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪುಣೆಯ ಖಡಕ್‌ವಾಸ್ಲದಲ್ಲಿರುವ NDA ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್‌ ಅಥವಾ ಬಿ.ಎಸ್‌.ಸಿ ಪದವಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆಗೆ ದೇಶದಾದ್ಯಂತ ಸುಮಾರು 2.24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 7,964 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ನಡೆಯುವ ಎಸ್‌.ಎಸ್‌.ಬಿ (ಸರ್ವಿಸ್‌ […]

ದೊಡ್ಡಣ್ಣಗುಡ್ಡೆ: ಮೇ. 3 ರಿಂದ 6 ರವರೆಗೆ ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರದ ನಾಗಾಲಯದಲ್ಲಿ ನಾಗದೇವರ ಪುನರ್ ಪ್ರತಿಷ್ಠೆ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ.3 ರಿಂದ 6 ರವರೆಗೆ ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಶ್ರೀ ಕಾಲಭೈರವ ಬಿಂಬ ಪ್ರತಿಷ್ಠಾಪನೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಮಹಾಚಂಡಿಕಾಯಾಗ, ನಿರಂತರ ಮಹಾ ಅನ್ನಸಂತರ್ಪಣೆಯು ಜರುಗಲಿದ್ದು ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿಗಳು ತಿಳಿಸಿದ್ದಾರೆ.