ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆಯ ಉದ್ಯಾಪನಾ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಏ. 6 ಗುರುವಾರದಂದು ಹುಣ್ಣಿಮೆಯ ಪರ್ವಕಾಲದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಳ್ಳಲಿರುವುದು.
ಆ ಪ್ರಯುಕ್ತ ಕ್ಷೇತ್ರದಲ್ಲಿ ಏ. 5 ರಂದು ಗಂಟೆ 5 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಋತ್ವಿಜರ ಸ್ವಾಗತ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯ ಹವಚನ, ಪಂಚಗವ್ಯ ಮೇಲನ, ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವೃತ ಕಲ್ಪೋಕ್ತ ಪೂಜಾ ಉದ್ಯಾಪನ, ಕಲಶ ಪ್ರತಿಷ್ಠೆ.
ಗುರುವಾರ ಬೆಳಿಗ್ಗೆ ಗಂಟೆ 8 ರಿಂದ ಆದ್ಯ ಗಣಪತಿಯಾಗ, ಶ್ರೀ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜಾ ಉದ್ಯಾಪನ ಹೋಮ. ಶ್ರೀ ಸತ್ಯನಾರಾಯಣ ವೃತ ಕಥೆ ಆರಂಭ. ಬೆಳಿಗ್ಗೆ ಗಂಟೆ 10:30 ರಿಂದ ಕಲ್ಪೋಕ್ತ ಪೂಜಾ ಮಹಾಮಂಗಳಾರತಿ ನೃತ್ಯರಾಧನೆ, 49 ಕಲಶ ದಾನ. ಬ್ರಾಹ್ಮಣ ಸುವಾಸಿನೆ ಆರಾಧನೆ, ದಂಪತಿ ಪೂಜೆ, ಕನ್ನಿಕಾ ಪೂಜೆ, ಕುಮಾರ ಪೂಜೆ, ಆಚಾರ್ಯ ಪೂಜೆ, ಮಹಾಪೂಜೆ. ಮಧ್ಯಾಹ್ನ ಗಂಟೆ 12:30 ರಿಂದ ಮಹಾ ಅನ್ನಸಂತರ್ಪಣೆ ನೆರವೇರಲಿದೆ. ಕ್ಷೇತ್ರ ಪ್ರತಿಷ್ಠಾಪನೆಗೊಂಡು ಸತತ ನಾಲ್ಕನೆಯ ಬಾರಿ ಈ ಮಹಾನ್ ವೃತ ಕಲ್ಪೋಕ್ತ ಪೂಜೆ ಉದ್ಯಪನಾ ಮಹೋತ್ಸವವನ್ನು ಅಭೂತಪೂರ್ವವಾಗಿ ಕಾಣಲಿವೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ.