ಆಳ್ವಾಸ್ ಶುಶ್ರೂಷ ಮಹಾವಿದ್ಯಾಲಯದ ದುನಿಯಾ ವಿನೋದ್ ಜಾನ್‌ಗೆ ರ್‍ಯಾಂಕ್

ಮೂಡುಬಿದಿರೆ: ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದವರು ಸೆಪ್ಟೆಂಬರ್ ೨೦೧೯ರಂದು ನಡೆಸಿದ ಶುಶ್ರೂಷ ಪರೀಕ್ಷೆಯಲ್ಲಿ ಆಳ್ವಾಸ್ ಶುಶ್ರೂಷ ಮಹಾವಿದ್ಯಾಲಯದ ಅಂತಿಮ ವರ್ಷದ ಬೇಸಿಕ್ ಬಿ.ಎಸ್ಸಿ ನರ್ಸಿಂಗ್‌ನ ವಿದ್ಯಾರ್ಥಿನಿಯಾದ ದುನಿಯಾ ವಿನೋದ್ ಜಾನ್‌ರವರು ವಿಶ್ವವಿದ್ಯಾನಿಲಯಕ್ಕೆ ಒಂಬತ್ತನೇ ರ್‍ಯಾಂಕ್ ಹಾಗೂ ಎರಡು ವಿಷಯವಾರು ಪರೀಕ್ಷೆಯಲ್ಲಿ ಎಂಟನೇ ರ್‍ಯಾಂಕ್ ಪಡೆದಿರುತ್ತಾರೆ. ಇತರೆ ವಿಷಯವಾರು ಪರೀಕ್ಷೆಯಲ್ಲಿ ಜಿನ್ಸಿ ರೋಸ್‌ಇಸಾಕ್ ಮೂರನೇ, ಐದನೇ, ಏಳನೇ, ಎಂಟನೇ ಹಾಗೂ ಒಂಬತ್ತನೇ ರ್‍ಯಾಂಕ್, ಜೀನಾ ನೆಲ್ಸನ್ ಎಂಟನೇ ಹಾಗೂ ಹತ್ತನೇ ರ್‍ಯಾಂಕ್, ಉಮಾವತಿ ಆರನೇ, ಏಳನೇ ಹಾಗೂ ಹತ್ತನೇ ರ್‍ಯಾಂಕ್, ಕೆಝಿಯ.ಕೆ.ವರ್ಕಿ ಏಳನೇ ಹಾಗೂ ಎಂಟನೇ ರ್‍ಯಾಂಕ್, ಜ್ಯೋತಿ ಡಿ’ಸೋಜ ಆರನೇ ರ್‍ಯಾಂಕ್, ಜೆಮಿಕೆ.ಎಮ್ ಏಳನೇ ರ್‍ಯಾಂಕ್, ಜಿನ್‌ಷಾ ವಿ ಒಂಬತ್ತನೇ ರ್‍ಯಾಂಕ್, ದೀಪಾ ಆರ್ ಹತ್ತನೇ ರ್‍ಯಾಂಕ್ ಹಾಗೂ ಅಂಜನ ರಾಜನ್ ಹತ್ತನೇ ರ್‍ಯಾಂಕ್ ಪಡೆದಿರುತ್ತಾರೆ.