ಮುಂಬೈ: ಡ್ರಗ್ಸ್ ಆರೋಪದಡಿ ಎನ್ ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅಕ್ಟೋಬರ್ 6ರ ವರೆಗೆ ವಿಸ್ತರಣೆಗೊಂಡಿದೆ.
ಮುಂಬೈನ ಎನ್ಡಿಪಿಎಸ್ ವಿಶೇಷ ಕೋರ್ಟ್ ರಿಯಾ ಅವರ ನ್ಯಾಯಾಂಗ ಬಂಧನ ವಿಸ್ತರಿಸಿ ಇಂದು ಆದೇಶ ನೀಡಿದೆ.
ಡ್ರಗ್ಸ್ ಆರೋಪದಡಿ ರಿಯಾಳನ್ನು ಎನ್ ಸಿಬಿ ಸೆ. 9ರಂದು ಬಂಧಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ (ಸೆ.22 ರವರೆಗೆ ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನ್ಯಾಯಾಂಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಮತ್ತೆ ಆಕೆಯನ್ನು ಎನ್ ಸಿಬಿ ಪೊಲೀಸರು ನ್ಯಾಯಾಲಯಕ್ಕೆ ಹಾರುಪಡಿಸಿದ್ದರು.
ಕೋರ್ಟ್ ಮತ್ತೆ 14 ದಿನಗಳ ( ಅ. 6ರ ವರೆಗೆ) ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಇದೇ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧಿತರಾಗಿರುವ ರಿಯಾ ಸಹೋದರ ಶೋಯಿಕ್ ಮತ್ತು ರಿಯಾ ಅವರು ಜಾಮೀನು ಕೋರಿ ಮುಂಬೈ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ನಾಳೆ (ಸೆಪ್ಟೆಂಬರ್ 23ರಂದು) ಅರ್ಜಿ ವಿಚಾರಣೆ ನಡೆಯಲಿದೆ. ಈ ಬಗ್ಗೆ ರಿಯಾ ಪರ ವಕೀಲ ಸತೀಶ್ ಮಾನಶಿಂದೆ ಮಾಹಿತಿ ನೀಡಿದ್ದಾರೆ.