ಹಿಂದೂ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಡಾ.ತ್ರಿವೇಣಿ ವೇಣುಗೋಪಾಲ್ ಪುನರಾಯ್ಕೆ

ಉದ್ಯಾವರ : 162 ವರ್ಷದ ಹಿರಿಯ ಶಿಕ್ಷಣ ಸಂಸ್ಥೆ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚಿಗೆ ಜರುಗಿ 2022- 2023 ಸಾಲಿಗೆ ಅಧ್ಯಕ್ಷರಾಗಿ ಡಾ. ತ್ರಿವೇಣಿ ವೇಣುಗೋಪಾಲ್ ಪುನರಾಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಶ್ರೀಮತಿ ರಾಜೀವಿ ಉಮೇಶ್ ಕರ್ಕೇರ, ಕಾರ್ಯದರ್ಶಿಗಳಾಗಿ ಶ್ರೀಮತಿ ಅಶ್ವಿನಿ ದೇವೇಂದ್ರ , ಜತೆಕಾರ್ಯದರ್ಶಿಗಳಾಗಿ ಶ್ರೀಮತಿ ಜ್ಯೋತಿ ರವೀಂದ್ರ ಶೆಟ್ಟಿ ,ಕೋಶಾಧಿಕಾರಿಗಳಾಗಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.