ಮಾಹೆ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಮುತಾಲಿಕ್ ಇವರಿಗೆ ಸರ್ ಸಿ.ವಿ. ರಾಮನ್ ಯಂಗ್ ಸೈಂಟಿಸ್ಟ್ ಸ್ಟೇಟ್ ಪ್ರಶಸ್ತಿ

ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ನ ಪ್ರೊಫೆಸರ್ ಮತ್ತು ಫಾರ್ಮಾಸ್ಯೂಟಿಕ್ಸ್ ವಿಭಾಗದ ಮುಖ್ಯಸ್ಥ, ಡಾ. ಶ್ರೀನಿವಾಸ್ ಮುತಾಲಿಕ್ ಇವರಿಗೆ ಜೀವ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಸರ್ ಸಿ.ವಿ. ರಾಮನ್ ಯಂಗ್ ಸೈಂಟಿಸ್ಟ್ ಸ್ಟೇಟ್ ಪ್ರಶಸ್ತಿ ದೊರೆತಿದೆ.

2023 ರ ಮಾರ್ಚ್ 23 ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಡಾ ಶ್ರೀನಿವಾಸ್ ಮುತಾಲಿಕ್ ಪ್ರಶಸ್ತಿಯನ್ನು ಸ್ವೀಕರಿಸಿದರು. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿದರು. ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್, ಎ ಎಸ್ ಕಿರಣ್ ಕುಮಾರ್ (ಇಸ್ರೋದ ಮಾಜಿ ಅಧ್ಯಕ್ಷರು), ಪ್ರೊ. ಗೋವಿಂದನ್ ರಂಗರಾಜನ್ (ನಿರ್ದೇಶಕರು, IISc) ಮತ್ತು ಡಾ ಇ ವಿ ರಮಣ ರೆಡ್ಡಿ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಉಪಸ್ಥಿತರಿದ್ದರು.

ಡಾ ಮುತಾಲಿಕ್ ಅಡ್ವಾನ್ಸ್ಡ್ ಡ್ರಗ್ ಡೆಲಿವರಿ ಸಿಸ್ಟಮ್ಸ್ ಮತ್ತು ನ್ಯಾನೊಮೆಡಿಸಿನ್ ಕ್ಷೇತ್ರದಲ್ಲಿ ಪ್ರಖ್ಯಾತ ಸಂಶೋಧಕರಾಗಿದ್ದಾರೆ. ದೇಶದ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ 200 ಕ್ಕೂ ಪ್ರಕಾಶನಗಳನ್ನು ಮಾಡಿರುವ ಇವರು 7 ಪೇಟೆಂಟ್‌ಗಳನ್ನು ಹೊಂದಿದ್ದಾರೆ.