ಡಾ. ಎಂಎನ್ ರಾಜೇಂದ್ರಕುಮಾರ್ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಸ್ಟಡೀಸ್ ಹೊಸದಿಲ್ಲಿ ವತಿಯಿಂದ  ಇಂಡೋ- ಶ್ರೀಲಂಕಾ ಎಕಾನಮಿಕ್ ಕೋ-ಆಪರೇಷನ್ ಕಾನ್ಫರೆನ್ಸ್ ನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರಕುಮಾರ್ ಅವರಿಗೆ ಇಂಟರ್ನ್ಯಾಷನಲ್ ಲೀಡರ್ಶಿಪ್ ಇನ್ನೋವೇಶನ್ ಎಕ್ಸಲೆನ್ಸ್ ಅವಾರ್ಡ್ 2019 ಪ್ರಶಸ್ತಿಯನ್ನು ಶ್ರೀಲಂಕಾದಲ್ಲಿ ನೀಡಿ ಗೌರವಿಸಲಾಯಿತು.

ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ ಮತ್ತು ಫ್ರಾನ್ಸ್ ಮಿಂಡಾನಾವೊದ ಅಂತರಾಷ್ಟ್ರೀಯ ರಾಜಕುಮಾರಿ ಇಸಾಬೆಲ್ಲೆ ಲಾಫೋರ್ಗ್ ಅವರಿಂದ ಡಾ| ರಾಜೇಂದ್ರ ಕುಮಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.ಶ್ರೀಲಂಕಾದ ಹೈ ಕಮಿಷನರ್ ತರುಣ್ ಜಿತ್ ಸಿಂಗ್ ಸಂಧು, ತಮಿಳುನಾಡು ಸರಕಾರದ ಸಹಕಾರ ಸಚಿವ ಸೆಲ್ಲೂರು ಕೆ. ರಾಜು, ಶ್ರೀಲಂಕಾದ ಸಾಂಸ್ಕೃತಿಕ ಮತ್ತು ಹೌಸಿಂಗ್ ಇಲಾಖೆಯ ನಿರ್ದೇಶಕಿ ಅನುಷಾ ಗೋಕುಲಾ ಫೆರ್ನಾಂಡೋ, ಯುಎಸ್ಎ ಬ್ರಾಂಡ್ ಅಂಬಾಸೆಡರ್ ಡಾ| ಹರಿಕೃಷ್ಣ ಮಾರನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಡಾ| ಎಂ. ಎನ್ ರಾಜೇಂದ್ರಕುಮಾರ್ ಅವರು ಸತತ 25 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತಂದು ಸಹಕಾರಿ ಕ್ಷೇಥ್ರದ ಅಭಿವೃದ್ದಿಗೆ ಕಾರಣರಾದವರು.