ಉಡುಪಿ: ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ರವರ ವಿಚಾರಧಾರೆಗಳು ಸಾರ್ವಕಾಲಿಕ ಮಾರ್ಗದರ್ಶಿ ಸೂತ್ರಗಳಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಈ ಕುರಿತು ಅವಲೋಕಿಸುವ ಅನಿವಾರ್ಯತೆಯಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ರವರ ವಿಚಾರಧಾರೆ ಕುರಿತು ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಕೆ, ಅಭಯ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ರವರ ವಿಚಾರಧಾರೆಗಳ ಪ್ರಸ್ತುತ ಅಧ್ಯಯನದ ಮಾರ್ಗಗಳ ಬಗ್ಗೆ ವಿಶ್ಲೇಷಿಸಿ, ಮಹಾನ್ ಚಿಂತಕ ಅಂಬೇಡ್ಕರ್ ಮನುಕುಲದ ಸರ್ವರನ್ನೂ ಒಳಗೊಳ್ಳುವ ವ್ಯಕ್ತಿತ್ವವೆಂದು ನುಡಿದರು.
ಡಾ. ಬಿ. ಆರ್. ಅಂಬೇಡ್ಕರ್ರವರ ಜೀವನ ಸಂಘರ್ಷ, ಜೀವನ ಅನುಭವಗಳು, ಅವರನ್ನು ಇಂದಿಗೂ ಸಮಕಾಲೀನರಿಗಿಂತ ಭಿನ್ನವಾಗಿಸಿದೆ ಎಂದು ಪ್ರೊ. ಸದಾಶಿವ ಮರ್ಜಿ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಧಾರವಾಡ ಇವರು ತಮ್ಮ ಆಶಯ ಭಾಷಣದಲ್ಲಿ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಚಂದ್ರಿಕಾ ಸಿ. ಜೆ., ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀ ಲಕ್ಷ್ಮೀನಾರಾಯಣ ಪ್ರಭು, ತಾಲೂಕು ಪಂಚಾಯತ್ ಸದಸ್ಯರು, ಉಡುಪಿ, ಡಾ. ಗಣನಾಥ ಶೆಟ್ಟಿ ಎಕ್ಕಾರು, ರಾಜ್ಯ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾದ ಪ್ರೊ. ವಿನೀತ ಕೆ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಸುಜಯಾ ಕೆ. ಎಸ್., ಸಹಪ್ರಾಧ್ಯಾಪಕರು ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಸುಮನಾ ಬಿ. ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮವನ್ನು ನಿರೂಪಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀ ಸುಭಾಷ್ ಹೆಚ್. ಕೆ. ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ, ಬೋಧಕ/ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿ ವೃಂದ, ಶಿಕ್ಷಕ-ರಕ್ಷಕ ಸಂಘ, ಎನ್.ಎಸ್.ಎಸ್. ಸಲಹಾ ಸಮಿತಿ ಸದಸ್ಯರುಗಳು, ಎನ್.ಎಸ್.ಎಸ್. ಘಟಕ ನಾಯಕರು, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಪದಾಧಿಕಾರಿಗಳು, ಹಳೆವಿದ್ಯಾರ್ಥಿ ವೃಂದ, ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ವಿಶ್ವವಿದ್ಯಾನಿಲಯಗಳಾದ ಮಂಗಳೂರು, ಕಿಮ್ಸ್ ಬೆಂಗಳೂರು, ತುಮಕೂರು, ಮೈಸೂರು, ಕುವೆಂಪು, ಧಾರವಾಡ, ಕಾನೂನು ವಿಶ್ವವಿದ್ಯಾನಿಲಯ ಬೆಂಗಳೂರು, ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಇಲ್ಲಿನ ಎನ್.ಎಸ್. ಎಸ್. ಯೋಜನಾಧಿಕಾರಿಗಳು ಮತ್ತು ಸುಮಾರು 150 ಸ್ವಯಂಸೇವಕರು ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ “ಹಿಂದೂ ಕೋಡ್ ಬಿಲ್”, “ಅಂಬೇಡ್ಕರ್ ಮತ್ತು ಮಹಿಳೆಯರ ಹಕ್ಕುಗಳು”, “ಸಂವಿಧಾನ ಮತ್ತು ಸಮಕಾಲೀನ ರಾಜಕೀಯ” ಮತ್ತು “ಸಮಸಮಾಜ ಸಂವಿಧಾನ ಆಶಯ” ಈ ವಿಷಯಗಳ ಕುರಿತು ಗೋಷ್ಠಿ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಅಮೃತ ಆತ್ರಾಡಿ, ಪ್ರೊ. ಜಿ. ರಾಜಶೇಖರ, ಡಾ. ಮೋಹನ್ ಚಂದ್ರಗುತ್ತಿ ವಿಷಯವನ್ನು ಮಂಡಿಸಿದರು. ಡಾ. ಮಹಾಬಲೇಶ್ವರ ರಾವ್ ಮತ್ತು ಪ್ರೊ. ರಾಜೇಂದ್ರ ಎಸ್. ನಾಯಕ್ರವರು ಗೋಷ್ಠಿಗಳಲ್ಲಿ ಸಮನ್ವಯಕಾರರಾಗಿ ವಿಷಯಗಳನ್ನು ಸಮನ್ವಯಗೊಳಿಸಿದರು. ಡಾ. ರಾಘವೇಂದ್ರ ಪಿ ಕೆ. ಮತ್ತು ಶ್ರೀ ದಿನೇಶ್ ಎಂ. ಕಾರ್ಯಕ್ರಮ ನಿರ್ವಹಿಸಿದರು. ಸಂಜೆ ವಿವಿಧ ಕಾಲೇಜಿನ ಸ್ವಯಂಸೇವಕ ವಿದ್ಯಾರ್ಥಿಗಳಿಂದ ಸಾಂಸ್ಕoತಿಕ ಕಾರ್ಯಕ್ರಮ ನೆರವೇರಿತು.