ಅಭಿನಂದಿಸಲು ಹಾರ ತುರಾಯಿ ತರಬೇಡಿ, ಕನ್ನಡ ಪುಸ್ತಕ ಕೊಡಿ; ಸಚಿವ ಸುನಿಲ್ ಕುಮಾರ್ ಕರೆ

ಕಾರ್ಕಳ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ನಿಮಗೆ ಏನಾದರೂ ಕೊಡಲೇಬೇಕೆಂದಿದ್ದರೆ ಒಂದು ಕನ್ನಡ ಪುಸ್ತಕ ತನ್ನಿ. ನಾನು ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆಂದು ನೂತನ ಸಚಿವ ವಿ. ಸುನಿಲ್ ಕುಮಾರ್ ಅವರು ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ.

ಇಂದು ಮಧ್ಯಾಹ್ನ ಕಾರ್ಕಳದ ಬಂಡಿಮಠದಲ್ಲಿ ಸಚಿವ ಸುನಿಲ್ ಕುಮಾರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಲಿದೆ. ಬಳಿಕ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.

ಈ ಹಿನ್ನೆಲೆಯಲ್ಲಿ ಅವರು, ಇಂದು ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಸುರತ್ಕಲ್, ಹೆಜಮಾಡಿ, ಬೆಳ್ಮಣ್, ಆನೆಕೆರೆ, ಅನಂತಶಯನ ಮಾರ್ಗವಾಗಿ ಕಾರ್ಕಳಕ್ಕೆ ಆಗಮಿಸಲಿದ್ದಾರೆ. ಕಾರ್ಕಳದಲ್ಲಿ ಸನ್ಮಾನ ನಡೆದ ಬಳಿಕ ಉಡುಪಿಗೆ ತೆರಳುವರು.