ಉಡುಪಿ ಸಂಸ್ಕೃತ ಕಾಲೇಜಿಗೆ ಮುಜರಾಯಿ ಇಲಾಖೆಯಿಂದ ₹ 25 ಲಕ್ಷ ದೇಣಿಗೆ ಮಂಜೂರು

ಉಡುಪಿ: ಉಡುಪಿ ಎಸ್ಎಂಎಸ್ ಪಿ ಸಂಸ್ಕೃತ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ರಾಜ್ಯ ಮುಜರಾಯಿ ಇಲಾಖೆಯಿಂದ ₹ 25 ಲಕ್ಷ ಅನುದಾನ ಮಂಜೂರಾಗಿದೆ.

ಅನುದಾನ ಮಂಜೂರುಗೊಳಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಹಕರಿಸಿದ ಶಾಸಕ ಕೆ ರಘುಪತಿ ಭಟ್ ಅವರಿಗೆ ಶಿಕ್ಷಣ ಸಂಸ್ಥೆ ಧನ್ಯವಾದ ತಿಳಿಸಿದೆ.