ದ.ಕ. ಜಿಲ್ಲೆ: ದುಬೈನಿಂದ ಆಗಮಿಸಿದ 15 ಸೇರಿ ಒಟ್ಟು 16 ಮಂದಿಗೆ‌ ಕೊರೊನಾ ಪಾಸಿಟಿವ್

ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದು ಬರೊಬ್ಬರಿ 16 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಇಂದು ಒಟ್ಟು 12 ಪುರುಷರು ಮತ್ತು 4 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ದುಬೈನಿಂದ ವಾಪಾಸ್ ಆದ 15 ಜನರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದ್ದು
ಅವರೆಲ್ಲರೂ ಮೇ.12ರಂದು ದುಬೈನಿಂದ ಏರ್ ಲಿಫ್ಟ್ ಆಗಿದ್ದರು.
123 ಜನರ ಪೈಕಿ 15 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಏರ್ ಲಿಫ್ಟ್ ಅಗಿದ್ದ 179 ಪ್ರಯಾಣಿಕರ ಪೈಕಿ 123 ಜನ ಮಂಗಳೂರಿನವರು. 15 ದುಬೈ ರಿಟರ್ನ್ಸ್ ಮತ್ತು 1 ಬೇರೆ ಸಂಪರ್ಕದಿಂದ ಸೋಂಕು ಕಂಡುಬಂದಿದೆ.
ಸದ್ಯ ದ.ಕ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.