ಉಡುಪಿ/ಮಂಗಳೂರು: ಮುಂದಿನ 48 ರಿಂದ 72 ಗಂಟೆಗಳ ಅವಧಿಯಲ್ಲಿ ಕರ್ನಾಟಕದ, ವಿಶೇಷವಾಗಿ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಅಧಿಕದಿಂದ ಅತ್ಯಾಧಿಕ ಮಳೆಯಾಗುವ ಸಾಧ್ಯತೆ ಇದ್ದು, ರೈತರಿಗೆ ಮತ್ತು ಮೀನುಗಾರರಿಗೆ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ.
ರೈತರು ಮುಂದಿನ 2-3 ದಿನಗಳವರೆಗೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಮುಂದೂಡಬಹುದು
(ಬಿತ್ತನೆ, ಸಿಂಪಡಣೆ, ರಸಗೊಬ್ಬರ ಬಳಕೆ ಮತ್ತು ಕೊಯ್ಲು)
ರೈತರು ಭತ್ತದ ನಾಟಿಯನ್ನು ಮುಂದೂಡಬಹುದು
ಮೀನುಗಾರರು ಸಮುದ್ರ ತೀರದಿಂದ ದೂರ ಇರುವಂತೆ ಸೂಚಿಸಲಾಗಿದೆ
ಅಡಿಕೆ ತೋಟಗಳಲ್ಲಿ ರೈತರು ನೀರು ಹರಿಯಲು ಅಗತ್ಯವಾದ ಒಳಚರಂಡಿ ಸೌಲಭ್ಯವನ್ನು ಮಾಡಬಹುದು
(ಕೊಳೆರೋಗವನ್ನು ತಪ್ಪಿಸಲು)
ಬೆಳೆ ಸಲಹೆಗಳು ಮತ್ತು ಮಳೆಯ ಮುನ್ಸೂಚನೆಗಾಗಿ ಸಾರ್ವಜನಿಕರು ಮೇಘದೂತ್ ಅಪ್ಲಿಕೇಶನ್ ಅನ್ನು ಬಳಸಬಹುದು
ಸಿಡಿಲಿನ ಮುನ್ಸೂಚನೆಗಾಗಿ ದಾಮಿನಿ ಅಪ್ಲಿಕೇಶನ್ ಬಳಸಬಹುದು