ಮಣಿಪಾಲ: ಕೋವಿಡ್ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ರಾಜೀವನಗರದ ಆಸುಪಾಸಿನ ಹಲವಾರು ಬಡ ಕುಟುಂಬಗಳಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ ಸೋಮವಾರ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಮಲಬಾರ್ ಗೋಲ್ಡ್ ನ ತಂಝೀಮ್ ಶಿರ್ವಾ, ಇರ್ಷಾದ್ ಮತ್ತು ನಿತೀನ್ ಶೇಟ್ ತಂಡದವರ ಸಂಪೂರ್ಣ ಸಹಕಾರದೊಂದಿಗೆ ಬಡಕುಟುಂಬಗಳಿಗೆ ಕಿಟ್ ಹಂಚಲಾಯಿತು.
ರೇವತಿ, ಸುನೀತಾ, ಭೋಜ, ಅಶೋಕ್ , ಮಾಧವ, ಸೆಂಥಿಲ್, ಸುರೇಶ್, ಜಾನಕಿ, ಪ್ರದೀಪ್, ಗೌರಿ ಚಂದ್ರ, ದಿನೇಶ್ ಪಾಣರ, ಗೀತಾ ಹಾಗೂ ಅನ್ನಪೂರ್ಣ ಕುಟುಂಬಕ್ಕೆ ದಿನಸಿ ಕಿಟ್ ಹಸ್ತಾಂತರ ಮಾಡಲಾಯಿತು.
ಸಾಮಾಜಿಕ ಕಾರ್ಯಕರ್ತ ಸುಧೀರ್ ನಾಯಕ್, 80 ಬಡಗಬೆಟ್ಟು ಗ್ರಾಪಂ ಸದಸ್ಯರಾದ ಸುಧೀರ್ ಪೂಜಾರಿ, ಪ್ಲೋಸಿ ಫರ್ನಾಂಡಿಸ್, ಸ್ಥಳೀಯರಾದ ಪ್ರಭಾಕರ ನಾಯಕ್, ವಿಶ್ವಮೂರ್ತಿ ಆಚಾರ್ಯ, ಪ್ರದೀಪ್ (ದೀಪು) ಪೂಜಾರಿ ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅತೀ ಬಡ ಕುಟುಂಬದ ಯುವತಿಯರ ವಿವಾಹಕ್ಕೆ ಸಹಾಯ, ಹೊಸ ಮನೆ ಕಟ್ಟಿ ಅರ್ಧಕ್ಕೆ ನಿಲ್ಲಿಸಿದ ಮನೆಗಳನ್ನು ಪೂರ್ತಿಗೊಳಿಸಲು ಆರ್ಥಿಕ ನೆರವು ಹಾಗೂ ಪರಿಸರ ಸಂರಕ್ಷಣೆಗೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.