ಮಂಗಳೂರು: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಮಾಸಿಕ ಯೋಜನೆಯಾದ ಬಡವು ಯೋಜನೆಯ 14 ಮತ್ತು 15ನೇ ಸೇವಾ ಕಾರ್ಯದ ಅಂಗವಾಗಿ ಬಡಜನರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಮಂಗಳೂರು ಬಜಾಲ್ ಸಮೀಪದ ಗುಡ್ಡೆ ಗುತ್ತು ನಿವಾಸಿ ಕಮಲಾ ಪಂಡಿತ್ ಅವರ ಕುಟುಂಬಕ್ಕೆ ಮತ್ತು ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ವಾಸವಾಗಿರುವ ಆಸೀಫ್ ಎಂಬವರ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ಶೋಭಾ ಪೂಜಾರಿ, ಸ್ಥಳೀಯರಾದ ಮುಖೇಶ್ ಪಂಡಿತ್, ನವಾಝ್, ಸಂಸ್ಥೆಯ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಪುಷ್ಪರಾಜ್ ರಾವ್, ಸಂಸ್ಥಾಪಕರು ರಾಜ್ಯ ಜೊತೆ ಕಾರ್ಯದರ್ಶಿ ವಿಕೇಶ್ ಕುಲಾಲ್, ಜೊತೆ ಕಾರ್ಯದರ್ಶಿ ರಿತೇಶ್ ಕುಲಾಲ್, ಸದಸ್ಯರಾದ ರಕ್ಷಿತ್ ಕುಲಾಲ್ ಯೆಯ್ಯಾಡಿ ಉಪಸ್ಥಿತರಿದ್ದರು.












