ದಿ. ಆಸ್ಕರ್ ಫರ್ನಾಂಡಿಸ್ ಅವರ 82ನೇ ಹುಟ್ಟು ಹಬ್ಬದ ಸ್ಮರಣಾರ್ಥ ವಸತಿ ನಿಲಯಗಳಿಗೆ ಅಗತ್ಯ ವಸ್ತು ವಿತರಣೆ

ಉಡುಪಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ದಿ. ಆಸ್ಕರ್ ಫರ್ನಾಂಡಿಸ್ ಅವರ 82ನೇ ಹುಟ್ಟು ಹಬ್ಬದ ಸ್ಮರಣಾರ್ಥ ಮಿಷನ್ ಕಾಂಪೌಂಡ್‌ನ ಸಿ.ಎಸ್.ಐ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲುಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಏ ಗಫೂರ್ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಅವರು ನಡೆದು ಬಂದ ದಾರಿ ಮತ್ತು ಅವರ ಆದರ್ಶಗಳನ್ನು ವಿವರಿಸಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ ಆಸ್ಕರ್ ಫರ್ನಾಂಡಿಸ್ ರವರ ಜನಸೇವೆ ಹಾಗೂ ಕೊಡುಗೆಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮುರಳಿ ಶೆಟ್ಟಿ, ದಿನೇಶ್ ಪುತ್ರನ್, ನರಸಿಂಹಮೂರ್ತಿ, ನಾಗೇಶ್ ಕುಮಾರ್ ಉದ್ಯಾವರ, ರೋನಾಲ್ಡ್ ಮನೋಹರ್ ಕರ್ಕಡ, ಗಣೇಶ್ ನೆರ್ಗಿ, ಶರತ್ ಶೆಟ್ಟಿ, ಪುಂಡರೀಶ್ ಕುಂದರ್, ಚಾರ್ಲ್ಸ್ ಅಂಬ್ಲರ್, ಮೇಡಮ್ ಕ್ಲಾರಾ, ಸ್ಯಾಮ್ಯುಯೆಲ್, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.