ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಅತ್ಯಧಿಕ ಅಂಕ ಗಳಿಸಿರುವ ಪ್ರತಿಭಾನ್ವಿತ 3 ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ, ಶಾಲಾ ಮಟ್ಟದಲ್ಲಿಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಡಾ. ವಿ. ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಮತ್ತು 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿನಿಗೆ ಕುಮಾರಿ ಗಾಯತ್ರಿ ಸ್ಮಾರಣ ಪಾರಿತೋಷಕ ವಿತರಣಾ ಸಮಾರಂಭವು, ಕೀರ್ತಿಶೇಷ ಡಾ. ವಿ. ಎಸ್. ಆಚಾರ್ಯ ಜನ್ಮ ದಿನವಾದ ಜುಲೈ 6 ಬುಧವಾರದಂದು ಅಪರಾಹ್ನ 4. 30 ಗಂಟೆಗೆ ಉಡುಪಿ ಕುಂಜಿಬೆಟ್ಟು ಜಿಲ್ಲಾ ಬಿಜೆಪಿ ಕಛೇರಿಯ ಸಹಕಾರ ಸೌಧದ “ಪಂಡಿತ್ ದೀನದಯಾಳ್ ಸಭಾಭವನ” ದಲ್ಲಿ ನಡೆಯಲಿದೆ.
ಪಾರಿತೋಷಕ ವಿತರಣಾ ಸಮಾರಂಭದಲ್ಲಿಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್. ಕಲ್ಮಾಡಿ ಮತ್ತುಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಇವರುಗಳು ಭಾಗವಹಿಸಿ ಪಾರಿತೋಷಕ ವಿತರಿಸಲಿದ್ದಾರೆ. ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ದೀನದಯಾಳ್ ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಯು. ಮೋಹನ ಉಪಾಧ್ಯ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಡಾ. ವಿ. ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಸಮಿತಿ ಸಂಚಾಲಕರಾದ ಶ್ರೀಮತಿ ಶಾಂತಾ ವಿ. ಆಚಾರ್ಯ ತಿಳಿಸಿದ್ದಾರೆ.