ಕೊರಗಜ್ಜ ದೈವಕ್ಕೆ ಹರಕೆ ಕೋಲ ಸಲ್ಲಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್

ಬಂಟ್ವಾಳ: ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ Rachita Ram ತುಳುನಾಡಿನ ಆರಾಧ್ಯ ದೈವ ಕೊರಗಜ್ಜ Koragajja ಹರಕೆ ಕೋಲ ಸಲ್ಲಿಸಿ ಭಕ್ತಿ ಸಮರ್ಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವುದಲ್ಲಿರುವ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿದ ರಚಿತಾ ರಾಮ್, ತಮ್ಮ ಮನಸ್ಸಿನ ಆಶಯಗಳು ಈಡೇರಿದ ಹಿನ್ನೆಲೆ ಹರಕೆ ಕೋಲ ಸೇವೆ ಸಲ್ಲಿಸಿದರು. ತಾವು ಕೈಗೊಂಡಿದ್ದ ಕೆಲವು ಮಹತ್ವದ ಕೆಲಸಗಳು ಯಶಸ್ವಿಯಾದರೆ ಕೊರಗಜ್ಜ ದೈವಕ್ಕೆ ಕೋಲ ನೀಡುವುದಾಗಿ ಅವರು ಹರಕೆ ಹೊತ್ತಿದ್ದರು. ಇದೀಗ ಆ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ರಚಿತಾ ರಾಮ್ ಸದ್ಯ ಧೃವ ಸರ್ಜಾ Dhruva Sarja ಅಭಿನಯದ ಕ್ರಿಮಿನಲ್ ಮತ್ತು ನೀನಾಸಂ ಸತೀಶ್ Ninasam Satish ಅಭಿನಯದ ಅಯೋಗ್ಯ 2 Ayogya 2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದರ ಜೊತೆಗೆ, ತಮಿಳಿನ ಪ್ರಮುಖ ನಿರ್ಮಾಣ ಸಂಸ್ಥೆಯೊಂದರೊಂದಿಗೆ ಮಾತುಕತೆ ನಡೆಯುತ್ತಿದ್ದು, ತೆಲುಗು ಭಾಷೆಯ ಎರಡು ಹೊಸ ಸಿನಿಮಾಗಳ ಘೋಷಣೆ ಈ ತಿಂಗಳಲ್ಲೇ ಆಗುವ ಸಾಧ್ಯತೆ ಇದೆ. ಬಹುಭಾಷಾ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಹೊಸ ಹೆಜ್ಜೆ ಇಡುತ್ತಿರುವ ರಚಿತಾ ರಾಮ್ ಅವರ ವೃತ್ತಿಜೀವನ ಮತ್ತಷ್ಟು ಚುರುಕುಗೊಂಡಿದೆ.