ಕೊಡವೂರು ಮಹಾರುದ್ರಯಾಗ: ಮಲ್ಪೆ ಬೀಚ್ ನಲ್ಲಿ ಭವ್ಯ ಗಂಗಾರತಿ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರಯಾಗದ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಭಾನುವಾರ ಸಂಜೆ ಭವ್ಯ ಗಂಗಾರತಿ ಕಾರ್ಯಕ್ರಮ ನೆರವೇರಿತು.ಕಾಶಿಯಿಂದ ಆಗಮಿಸಿದ್ದ ಪುರೋಹಿತರು ವೇದಘೋಷ ಹಾಗೂ ಮಂತ್ರೋಚ್ಚಾರಣೆಯೊಂದಿಗೆ ಗಂಗಾರತಿ ನೆರವೇರಿಸಿದರು. ಮತ್ಸ್ಯಸಂಪತ್ತು ವೃದ್ಧಿಗಾಗಿ ಸಮುದ್ರರಾಜನಿಗೆ ವಿಶೇಷ ಆರತಿ ಮಾಡಲಾಯಿತು. ಸಮುದ್ರ ತೀರದಲ್ಲಿ ಆಕರ್ಷಕ ದೀಪಗಳೊಂದಿಗೆ ನಡೆದ ಗಂಗಾರತಿಯು ಭಕ್ತರ ಗಮನಸೆಳೆಯಿತು. ಮಹಾರುದ್ರಯಾಗದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ನಡೆದ ಗಂಗಾರತಿ ವಿಶೇಷ ಆಕರ್ಷಣೆಯಾಯಿತು. ಕಾರ್ಯಕ್ರಮದ […]

ಕೊಲ್ಲೂರು: ಜೀಪು- ಟೆಂಪೋ ಮಧ್ಯೆ ಭೀಕರ ಅಪಘಾತ; ಇಬ್ಬರು ಮೃತ್ಯು, ಎಂಟು ಮಂದಿಗೆ ಗಾಯ

ಉಡುಪಿ: ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ನಡುವೆ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ಜ್ಯೋತಿ (34) ಹಾಗೂ ಆರ್ಯ ಅನೂಪ್ (26) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡವರನ್ನು ಆಯನ್ (5), ಅವನಿ (8), ಅರ್ಜುನ್ (9), ಮಿನಿ (60), ಅಬೆ (37), ಅನೂಪ್ (37), ಜ್ಯೋತಿ (43) ಹಾಗೂ ಜೀಪ್ ಚಾಲಕ ದೇವರಾಜ್ ಎಂದು ಗುರುತಿಸಲಾಗಿದೆ. […]

ಗಂಡ/ ಹೆಂಡತಿ ಒಬ್ಬರನ್ನೊಬ್ಬರು ಹೆಚ್ಚು ಪ್ರೀತಿಸಲು ಸಿಂಪಲ್ ಸೂತ್ರ ಇಲ್ಲಿದೆ

ಗಂಡ-ಹೆಂಡತಿ ನಡುವಿನ ಪ್ರೀತಿ ಮತ್ತು ಆತ್ಮೀಯತೆ ಹೆಚ್ಚಲು ದೊಡ್ಡ ರಹಸ್ಯಗಳ ಅಗತ್ಯವಿಲ್ಲ. ಪ್ರತಿದಿನದ ಸಣ್ಣ ಸಣ್ಣ ನಡೆಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಪ್ರೀತಿ ಹೆಚ್ಚಿಸಲು ಸರಳ ಮಾರ್ಗಗಳು ಮುಖ್ಯ ಮಂತ್ರ ನಂಬಿಕೆ + ಗೌರವ + ಸಂವಹನ + ಸಮಯ = ದೀರ್ಘಕಾಲದ ಸಂತೋಷದ ದಾಂಪತ್ಯ ಪ್ರೀತಿ ಒಂದೇ ದಿನದಲ್ಲಿ ಹೆಚ್ಚಾಗುವುದಿಲ್ಲ. ಪ್ರತಿದಿನದ ಸಣ್ಣ ಸಣ್ಣ ಕಾಳಜಿಗಳು ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ.

ಮಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ಬೆಳ್ತಂಗಡಿ ಬೆಳಾಲು ಯುವಕ ಮೃತ್ಯು

ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಬೆಳ್ತಂಗಡಿಯ ಬೆಳಾಲು ನಿವಾಸಿ ನೌಫಲ್ ಮೃತದುರ್ದೈವಿ. ನೌಫಲ್ ಕಾರ್ಯನಿಮಿತ್ತ ಲಿಫ್ಟ್‌ನಲ್ಲಿ ಮೇಲಕ್ಕೆ ಹೋಗುವಾಗ ಒಂದನೇ ಮಹಡಿ ಮತ್ತು ನೆಲಮಹಡಿ ಮಧ್ಯಭಾಗದಲ್ಲಿ ಲಿಫ್ಟ್ ಕೆಟ್ಟು ನಿಂತಿದೆ. ಈ ಸಂದರ್ಭ ನೌಫಲ್ ಅವರು ಲಿಫ್ಟ್ ನಲ್ಲಿ ಬಾಕಿಯಾಗಿರುವ ಬಗ್ಗೆ ಮಾಹಿತಿ ಪಡೆದ ಅಲ್ಲಿದ್ದ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ. ಒಂದನೇ ಮಹಡಿಯಲ್ಲಿ ಲಿಫ್ಟ್‌ನ ಅರ್ಧಭಾಗ ಇದ್ದ ಕಾರಣ ಲಿಫ್ಟ್ ಬಾಗಿಲು ಬಲವಂತದಿಂದ […]

ಕೊಡವೂರು ಮಹಾರುದ್ರಯಾಗ- ಬೀಚ್ ಕ್ರೀಡೋತ್ಸವಕ್ಕೆ ಚಾಲನೆ

ಉಡುಪಿ: ಕೊಡವೂರು ಮಹತೋಭಾರ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರಯಾಗದ ಪ್ರಯುಕ್ತ ಮಲ್ಪೆ ಬೀಚ್ ನಲ್ಲಿ ಇಂದು ಬೆಳಿಗ್ಗೆ ಬೀಚ್ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಮಕ್ಕಳು ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಲಗೋರಿಯಂತಹ ಕ್ರೀಡಾ ಚಟುವಟಿಕೆಗಳಲ್ಲಿ‌ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢಗೊಳ್ಳುತ್ತದೆ ಎಂದರು.ಮಹಾರುದ್ರಯಾಗದ ಜೊತೆ ಕ್ರೀಡೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಬಹಳ ಸಂತೋಷದ […]