‘ಧೂಮಂ ಟ್ರೇಲರ್​ ಬಿಡುಗಡೆಗೆ ಮುಹೂರ್ತ ನಿಗದಿ , ಹೊಂಬಾಳೆ ಫಿಲ್ಮ್ಸ್​ನ ಬಹುನಿರೀಕ್ಷಿತ ‘..ಚಿತ್ರ

‘ಹೊಂಬಾಳೆ ಫಿಲ್ಮ್ಸ್’​​ ಕನ್ನಡದ ಪ್ರಖ್ಯಾತ ಸಿನಿಮಾ ಪ್ರೊಡಕ್ಷನ್ ಹೌಸ್. ಸದ್ಯ ಈ ಚಿತ್ರ ನಿರ್ಮಾಣ ಸಂಸ್ಥೆ ಮುಟ್ಟಿದ್ದೆಲ್ಲವೂ ಚಿನ್ನ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಸಿನಿಮಾದ ಟ್ರೇಲರ್​ ಇನ್ನೆರಡು ದಿನಗಳಲ್ಲಿ ತೆರೆಕಾಣಲಿದೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ನಿರ್ಮಾಪಕ ವಿಜಯ್​ ಕಿರಂಗದೂರು ಅವರು ಮಲಯಾಳಂನ ಬಹುಬೇಡಿಕೆಯ ನಟ ಫಹಾದ್​ ಫಾಸಿಲ್​ ಜೊತೆ ಕೈಜೋಡಿಸಿದ್ದಾರೆ. ‘ಧೂಮಂ’ ಹೊಂಬಾಳೆ ಫಿಲ್ಮ್ಸ್​ನ ಮುಂಬರುವ ಬಹುನಿರೀಕ್ಷಿತ ಚಿತ್ರ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ.

ಕೆಲ ದಿನಗಳ ಹಿಂದೆ ಫಸ್ಟ್ ಲುಕ್​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಟ್ರೇಲರ್​ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದೆ ಹೊಂಬಾಳೆ ಬಳಗ. ಹೌದು, ಇದೇ ಜೂನ್ 8ರ ಮಧ್ಯಾಹ್ನ 12:59ಕ್ಕೆ ​​’ಧೂಮಂ’ ಟ್ರೇಲರ್​ ಅನಾವರಣಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಕೆಜಿಎಫ್ 2, ಡಿವೈನ್​ ಸ್ಟಾರ್​ ಸಾರಥ್ಯದ ಕಾಂತಾರದಂತಹ ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಭಾರತದಾದ್ಯಂತ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ. ಸದ್ಯ ಕನ್ನಡ ಭಾಷೆ ಮಾತ್ರವಲ್ಲದೇ ದಕ್ಷಿಣ ಸಿನಿ ರಂಗದತ್ತ ಗಮನ ಹರಿಸಿದೆ ‘ಹೊಂಬಾಳೆ ಫಿಲ್ಮ್ಸ್’.

ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್​ ಬಿಡುಗಡೆ ದಿನಾಂಕವನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಓರ್ವ ಅಭಿಮಾನಿ ಕಾಮೆಂಟ್​ ಮಾಡಿದ್ದು, ‘ಮತ್ತೊಂದು ಮಾಸ್ಟರ್ ಪೀಸ್ ಬರಲಿದೆ’ ಎಂದು ಬರೆದಿದ್ದಾರೆ.

‘ಹೆಚ್ಚು ಕಾಯಲು ಸಾಧ್ಯವಿಲ್ಲ’ ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ. ಫೈಯರ್​ ಎಮೋಜಿಗಳಿಂದ ಕಾಮೆಂಟ್​ ವಿಭಾಗ ತುಂಬಿ ತುಳುಕುತ್ತಿದೆ. ಉಳಿದಂತೆ ಯುವ, ಸಲಾರ್​ ಸಿನಿಮಾ ಸೇರಿದಂತೆ ಮುಂದಿನ ಚಿತ್ರಗಳ ಬಗ್ಗೆ ಅಪ್​ಡೇಟ್ಸ್​​ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

ಲೂಸಿಯಾ, ಯೂ ಟರ್ನ್ ಸಿನಿಮಾ ಖ್ಯಾತಿಯ ಪವನ್​ ಕುಮಾರ್​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಫಹಾದ್​ ಫಾಸಿಲ್ ಕೂಡ ಓರ್ವ ಪ್ರಖ್ಯಾತ​ ಬಹುಭಾಷಾ ನಟ. ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಅಪರ್ಣಾ ಬಾಲಮುರಳಿ ಚಿತ್ರದ ನಾಯಕ ನಟಿ.

ಸಿನಿಮಾವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಖ್ಯಾತಿ ಬಗ್ಗೆ ಹೆಚ್ಚೇನು ಹೇಳಬೇಕೆಂದಿಲ್ಲ. ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಎಲ್ಲಾ ಹಿನ್ನೆಲೆ ಸಹಜವಾಗಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ವೀಕೆಂಡ್​ ವಿತ್​ ರಮೇಶ್​: ಸಾಧಕರ ಕುರ್ಚಿ ಏರಿದ ಡಿಸಿಎಂ ಡಿಕೆಶಿ: ಸಿಎಂ ಸಿದ್ದರಾಮಯ್ಯ ಹೀಗಂದ್ರು!

ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಪ್ರೀತಾ ಜಯರಾಮನ್​ ಅವರ ಕ್ಯಾಮರಾ ವರ್ಕ್​​ ಈ ಚಿತ್ರಕ್ಕಿದೆ. ಈ ಪ್ಯಾನ್​ ಇಂಡಿಯಾ ಸಿನಿಮಾದ ಫಸ್ಟ್​ ಲುಕ್​ ಏಪ್ರಿಲ್​ನಲ್ಲಿ ಅನಾವರಣಗೊಂಡಿತ್ತು. ಆ ಪೋಸ್ಟರ್​ಗೆ ‘ಬೆಂಕಿಯಿಲ್ಲದೇ ಹೊಗೆ ಇಲ್ಲ, ಮೊದಲ ಕಿಡಿ ಇಲ್ಲಿದೆ’ ಎಂಬ ಕ್ಯಾಪ್ಷನ್​​ ಕೊಟ್ಟು ಗಮನ ಸೆಳೆದಿತ್ತು.