ಜೂ.30 ರಂದು 3 ಸ್ಥಾನಗಳಿಗೆ ವಿಧಾನ ಪರಿಷತ್ತಿನ ಉಪಚುನಾವಣೆ

ಬೆಂಗಳೂರು : ಸದಸ್ಯರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಈ ತಿಂಗಳ 30ರಂದು ಉಪಚುನಾವಣೆ ನಡೆಯಲಿದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ್, ಆರ್. ಶಂಕರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣಾ ಆಯೋಗ ಇಂದು ಉಪಚುನಾವಣೆ ವೇಳಾಪಟ್ಟಿ ಘೋಷಿಸಿತು. ವಿಧಾನಸಭೆಯ ಶಾಸಕರು ಚುನಾವಣೆಯ ಮತದಾರರಾಗಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 135, ಬಿಜೆಪಿ […]

SSLC ಪರೀಕ್ಷಯ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ sslc.karnataka.gov.in ನಲ್ಲಿ ಪ್ರವೇಶಿಸಬಹುದು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEEB) SSLC (10 ನೇ ತರಗತಿ) ಪರೀಕ್ಷೆ 2023 ರ ಮರುಮೌಲ್ಯಮಾಪನ ಮತ್ತು ಮರು ಲೆಕ್ಕಾಚಾರದ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವಂತೆ ತಮ್ಮ ನೋಂದಣಿ ಸಂಖ್ಯೆಗಳು ಮತ್ತು ಜನ್ಮ ದಿನಾಂಕಗಳನ್ನು ನಮೂದಿಸಬೇಕಾಗುತ್ತದೆ. ಈ ವರ್ಷ ಒಟ್ಟು 8,35,102 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟಾರೆ ಉತ್ತೀರ್ಣ ಶೇಕಡಾ 83.89 ರಷ್ಟಿದ್ದು, […]

ಚೊಚ್ಚಲ ಬಾರಿಗೆ ಸೆಮೀಸ್‌ಗೇರಿದ ಬೆಲಾರಸ್‌ ಪ್ರತಿಭೆ: ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್‌

ಪ್ಯಾರಿಸ್‌: ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್​ನಲ್ಲಿ ಬೆಲಾರಸ್‌ನ ಅರೀನಾ ಸಬಲೆಂಕಾ 6-4, 6-4ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್​ ವಿಭಾಗದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರೀನಾ ಸಬಲೆಂಕಾ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದರು. ಸಬಲೆಂಕಾ ಸೆಮಿಫೈನಲ್​ನಲ್ಲಿ ಝೆಕ್ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಹೆಚ್ಚು ಆಕರ್ಷಣೆಗೆ ಕಾರಣವಾಗಿತ್ತು. […]

ಸಾಧಕರ ಕುರ್ಚಿ ಏರಿದ ಡಿಸಿಎಂ ಡಿಕೆಶಿ:ವೀಕೆಂಡ್​ ವಿತ್​ ರಮೇಶ್

ವೀಕೆಂಡ್​ ವಿತ್​ ರಮೇಶ್​’ ಅಪಾರ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ.ಅಂತಿಮ ಘಟ್ಟ ತಲುಪಿರುವ ವೀಕೆಂಡ್​ ವಿತ್​ ರಮೇಶ್​ ಶೋನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಆಗಮಿಸಲಿದ್ದಾರೆ ಕನ್ನಡಿಗರ ಮನೆಗೆದ್ದಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಬಂದು ತಮ್ಮ ಸಾಧನೆಯ ಪುಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ. ‘ವೀಕೆಂಡ್​ ವಿತ್​ ರಮೇಶ್​’ ಶೋನ ಈ ವಾರದ ಪ್ರೋಮೋ ರಿಲೀಸ್​ ಆಗಿದೆ. ಸೋಷಿಯಲ್​ ಮೀಡಿಯಾಗಳಲ್ಲೂ ಪ್ರೋಮೋ ರಿಲೀಸ್​ ಮಾಡಿರುವ ಜೀ ವಾಹಿನಿ, ”ರಾಜ್ಯ ಕಂಡ […]

ಮಾಜಿ IPS​ ಅಧಿಕಾರಿ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖನೌದಲ್ಲಿ ಮಾಜಿ ಐಪಿಎಸ್​ ಅಧಿಕಾರಿಯೊಬ್ಬರು ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಮಾಜಿ ಐಪಿಎಸ್​ ಅಧಿಕಾರಿಯೊಬ್ಬರು ತಮ್ಮ ಲೈಸನ್ಸ್ ಹೊಂದಿದ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯ ರಾಜಧಾನಿ ಲಖನೌದಲ್ಲಿ ನಡೆದಿದೆ. “ನನ್ನ ಈ ಸಾವಿಗೆ ನಾನೇ ಹೊಣೆ” ಎಂದು ಮಾಜಿ ಅಧಿಕಾರಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್​ನೋಟ್ ಸ್ಥಳದಲ್ಲಿ ದೊರೆತಿದೆ. ದಿನೇಶ್ ಕುಮಾರ್ ಶರ್ಮಾ (73) ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಇಲ್ಲಿನ ಗೋಮತಿ […]