ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಗೋಪಾಲ್ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಪಂಚಾಯತ್ ಸದಸ್ಯರಿಂದ ಸನ್ಮಾನಿಸಿ ಬೀಳ್ಕೋಡಲಾಯಿತು.
ಇದೇ ವೇಳೆ ನೂತನ ಪಿಡಿಓ ಆಗಿ ಅಧಿಕಾರ ಸ್ವೀಕರಿಸಿದ ಸುರೇಶ್ ಕೆ ಅವರಿಗೆ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಧನಂಜಯ ಕುಂದರ್, ಪಂಚಾಯತ್ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯಕ್, ಸುರೇಶ್ ನಾಯಕ್ ಮೀನಾ ಪಿಂಟೊ, ಸಿಂಪ್ರಿಯಾ ರೊಡ್ರಿಗಸ್, ವೆಂಕಟೇಶ್ ಕುಲಾಲ್, ರವಿರಾಜ್, ವಿನಯಾ ಆಚಾರ್ಯ, ಮಂಜುನಾಥ್ ಆಚಾರ್ಯ, ಅನುಶಾ ಆಚಾರ್ಯ, ಶರತ್ ಶೆಟ್ಟಿ, ನಿರ್ಮಲ ಜಿ ಕೋಟ್ಯಾನ್, ಪುಷ್ಪಾ ಕುಲಾಲ್, ಶೋಭಾ ಡಿ ನಾಯಕ್, ರೇಖಾ ಪ್ರಕಾಶ್, ಮಾಲಿನಿ ಜತ್ತನ್ನ ಉಪಸ್ಥಿತರಿದ್ದರು.