ವಿಟ್ಲ: ನಾಪತ್ತೆಯಾಗಿದ್ದ ಕೊಳ್ನಾಡು ಗ್ರಾಮದ ಪಾಣಾಜಿಕೋಡಿಯ ಅರುಣ್ ಡಿಸೋಜ ಎಂಬವರ ಪತ್ನಿ ಶಿಲ್ಪಾ ಡಿಸೋಜ ಎಂಬಾಕೆಯನ್ನು ಪತ್ತೆ ಹಚ್ಚುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಪತಿ ಅರುಣ್ ಡಿಸೋಜ ಅವರು ತನ್ನ ಪತ್ನಿ ಶಿಲ್ಪಾ ಡಿಸೋಜ ನಾಪತ್ತೆಯಾಗಿದ್ದಾರೆ ಎಂದು ವಿಟ್ಲ ಠಾಣೆಗೆ ದೂರು ದಾಖಲಿಸಿದ್ದರು. ಹಾಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹೋಗಿರುವ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ನಿಟ್ಟಿನಲ್ಲಿ ಕಾರ್ಯಾಚರಣೆ ಇಳಿದ ಪೊಲೀಸರು, ಶಿಲ್ಪಾರನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಶಿಲ್ಪಾ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ. ಪತಿ ನಾಪತ್ತೆ ಪ್ರಕರಣ ದಾಖಲಿಸಿರುವ ಮಾಹಿತಿ ತಿಳಿಯುತ್ತಲೇ ಸ್ವತ: ತಾನೇ ಠಾಣೆಗೆ ಹಾಜರಾಗಿದ್ದಾರೆ. ಬಳಿಕ ಪತಿ ಅರುಣ್ ದೂರು ವಾಪಸ್ಸು ಪಡೆದಿದ್ದಾರೆ ಎಂದು ತಿಳಿದುಬಂದಿದೆ.