ಕುಂದಾಪುರ: “ಡೆಂಗ್ಯೂ ಸೋಲಿಸಿ ಜೀವ ಉಳಿಸಿ” ಎನ್ನುವ ಘೋಷಣೆಯೊಂದಿಗೆ ಹೈಕಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಗಸ್ಟ್ 24 ರಂದು ಡೆಂಗ್ಯೂ ಜ್ವರ ಕುರಿತಾದ ಅರಿವು ಜಾಥಾ ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಆವರ್ಸೆ ಹಾಗೂ ಸರ್ಕಾರಿ ಪ್ರೌಢಶಾಲೆ ಹೈಕಾಡಿ ಇವರ ಜಂಟಿ ಸಹಯೋಗದೊಂದಿಗೆ ಜಾಥಾ ನಡೆಯಿತು. ಸ್ಥಳೀಯ ಮನೆಗಳು ಹಾಗೂ ಅಂಗಡಿಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲಾಯಿತು.
ಆರೋಗ್ಯ ಮತ್ತು ಕ್ಷೇಮ ಕೇಂದ್ರ- ಹಿಲಿಯಾಣ ಇಲ್ಲಿನ ಸಮುದಾಯ ಆರೋಗ್ಯ ಅಧಿಕಾರಿ ವಿಜೇಂದ್ರ ಡೆಂಗ್ಯೂ ಹರಡುವ ಬಗೆ ಹಾಗೂ ಡೆಂಗ್ಯೂ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಆರೋಗ್ಯಾಧಿಕಾರಿ ಆಶಿಶ್ ಸೋನಿ ಎಸ್ , ಹಿಲಿಯಾಣ ವ್ಯಾಪ್ತಿಯ PHCO ಅಶ್ವಿನಿ ಹಾಗೂ ಸ್ಥಳೀಯ ಆಶಾ ಕಾರ್ಯಕರ್ತೆಯರು, ಪ್ರೌಢಶಾಲೆಯ ಸಹ ಶಿಕ್ಷಕರು ಜಾಥಾದಲ್ಲಿ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಸತೀಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಜಾಥಾ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಿಹಿಯನ್ನು ಹಂಚಲಾಯಿತು. ಹೈಕಾಡಿ ಹೈಸ್ಕೂಲ್ ನ ಅರಣ್ಯ ಪರಿಸರ ಸಂಘದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಥಳೀಯರು ಸ್ವಯಂ ಪ್ರೇರಣೆಯಿಂದ ಜಾಥಾದಲ್ಲಿ ಭಾಗವಹಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.