ಚೆನ್ನೈ: ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ‘ಡೆಲ್ಟಾ’ ವೈರಸ್ ಗೆ ಲಸಿಕೆ ಪಡೆದ ಹಾಗೂ ಪಡೆಯದವರಿಗೂ ಸೋಂಕು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವಿಚಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಚೆನ್ನೈನಲ್ಲಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಡೆಲ್ಟಾ ರೂಪಾಂತರದ ಪರಿಣಾಮಗಳು ಲಸಿಕೆ ಪಡೆದವರು, ಪಡೆಯದವರಲ್ಲಿ ಭಿನ್ನವಾಗಿರುವುದಿಲ್ಲ. ಆದರೆ, ಡೆಲ್ಟಾದಿಂದ ಸಂಭವಿಸುವ ಸಾವಿನ ಸಾಧ್ಯತೆ ಲಸಿಕೆ ಪಡೆದವರಲ್ಲಿ ಕಡಿಮೆ ಆಗಿದೆ ಎಂಬುವುದು ಐಸಿಎಂಆರ್ ಅಧ್ಯಯನದಲ್ಲಿ ಉಲ್ಲೇಖವಾಗಿದೆ.
ಲಸಿಕೆಗಳಿಂದ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳಲು ಡೆಲ್ಟಾ ಮಾದರಿಗೆ ಸಾಧ್ಯವೂ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.