ಉಡುಪಿ: ‘ಹೆಲ್ಪಿಂಗ್ ಫಾರ್ ಪಾಂಡಮೆಮಿಕ್’ ಎಂಬ ಕುವೈಟ್ ಉದ್ಯೋಗ ಮಾಡುತ್ತಿರುವ ಜಿಲ್ಲೆಯ ಯುವಕರ ತಂಡವೊಂದು ಕೋವಿಡ್ ಲಾಕ್ ಡೌನ್ ನಿಂದಾಗಿ ಆಹಾರ ಸಿಗದೆ ಪರದಾಡುತ್ತಿದ್ದ ನಿರ್ಗತಿಕರ ಹಸಿವನ್ನು ನೀಗಿಸುವ ಕಾರ್ಯ ಮಾಡಿದೆ.
ಈ ತಂಡದ ಸದಸ್ಯರು ಸ್ಥಳೀಯ ಯುವಕರ ಸಹಕಾರದೊಂದಿಗೆ ಬಸ್ ಸ್ಟ್ಯಾಂಡ್ ಮತ್ತು ರಸ್ತೆ ಬದಿಗಳಲ್ಲಿ ಮಲಗಿರುವ ನಿರ್ಗತಿಕರಿಗೆ, ಸೆಕ್ಯೂರಿಟಿ ಗಾರ್ಡ್ ಗಳಿಗೆ, ಟ್ರಕ್ ಚಾಲಕರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಿದರು.
ಹೆಲ್ಪಿಂಗ್ ಫಾರ್ ಪಾಂಡಮೆಮಿಕ್ ಸದಸ್ಯರಾದ ಧನಂಜಯ್ ದೇವಾಡಿಗ, ಸುದರ್ಶನ್ ಬಂಗೇರ, ನಿತಿನ್ ಬಂಗೇರ, ಮಣಿಕಂಠ, ಕಿಶೋರ್ ಕರ್ಕೇರ, ರೋಶನ್ ಮೈಂದನನ್ ಹಾಗೂ ಇತರರು ನಿರ್ಗತಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿ ಮಾದರಿಯಾದರು.