ಕೆಮ್ಮಣ್ಣು: ಗುಜ್ಜರಬೆಟ್ಟು ಎಸ್.ಸಿ. ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮದ ಪೂರ್ವಭಾವಿ ಸಭೆ

ಕೆಮ್ಮಣ್ಣು: ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ನಾಳೆ, ಅ. 26 ರಂದು ಸಂಜೆ 6.00 ಗಂಟೆಗೆ ಕೆಮ್ಮಣ್ಣು ಗುಜ್ಜರಬೆಟ್ಟು ಪರಿಶಿಷ್ಟ ಜಾತಿಯವರ ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ ನಡೆಯಲಿದೆ.

ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಮಂಗಳವಾರದಂದು ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಹಾಗೂ ಸ್ಥಳೀಯರೊಂದಿಗೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಮಹೇಶ್ ಠಾಕೂರ್, ದಿನಕರ್ ಬಾಬು, ಸ್ಥಳೀಯರಾದ ಪ್ರಶಾಂತ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.