ಕಾರ್ಕಳ: ಈಶ್ಚರೀಯ ವಿಶ್ವ ವಿದ್ಯಾಲಯದಲ್ಲಿ ದೀಪಾವಳಿ ಆಚರಣೆ

ಕಾರ್ಕಳ : ದೀಪಾವಳಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮವು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ಚರೀಯ ವಿಶ್ವ ವಿದ್ಯಾಲಯದಲ್ಲಿ ನವಂಬರ್ 16ರಂದು ಜರಗಿತು.

ರಾಜಯೋಗಿನಿ ಬ್ರಹ್ಮಾಕುಮಾರಿ ವಸಂತಿ ಇವರು ತಮ್ಮ ಪ್ರವಚನದಲ್ಲಿ ದೀಪಾವಳಿ ಎಂದರೆ ಮನೆ, ಅಂಗಡಿಯನ್ನು ಸ್ವಚ್ಚ ಮಾಡುತ್ತಾರೆ, ಅದರೆ ಮನಸ್ಸನ್ನು ಸ್ವಚ್ಚ ಮಾಡಬೇಕು. ದೀಪ ಬೆಳಗಿಸುತ್ತಾರೆ ಆದರೆ ವರ್ತಮಾನ ಸಮಯದಲ್ಲಿ ಪರಮಾತ್ಮ ಶಿವ ಅವತರಿತನಾಗಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆತ್ಮದ ದೀಪ ಬೆಳಗಿಸುತ್ತಾರೆ. ಮನುಷ್ಯರು ಮನೆಯನ್ನು ಶೃಂಗಾರ ಮಾಡುತ್ತಾರೆ, ನಿಜವಾಗಿ ಮನುಷ್ಯರಲ್ಲಿ ದೈವಿಗುಣವನ್ನು ತುಂಬಿಸಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ಬೆಳಗಿಸಬೇಕು. ದೀಪಾವಳಿಗೆ ವಿಶೇಷವಾಗಿ ಲಕ್ಷ್ಮಿ ದೇವಿಯಲ್ಲಿ ಹಣ ಮತ್ತು ಭ್ಯಾಗವನ್ನು ಬೇಡುತ್ತಿದ್ದು ಭ್ಯಾಗ ಎಂದರೆ ರೋಗ , ಸಂಪತ್ತು ಇಲ್ಲದೆ ಶಾಂತಿ ಇರುವುದಿಲ್ಲ. ಲಕ್ಷ್ಮಿಯ ಅಹ್ವಾನದಿಂದ ಸುಖ, ಶಾಂತಿ, ನೆಮ್ಮದಿ ಪಾಪ್ತಿಯಾಗಬೇಕಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ವರ್ಧಮಾನ ಶಾಲಾ ವಿದ್ಯಾರ್ಥಿಗಳಾದ ಆದಿತ್ರೀಯ ಸಿಂಧು ಮತ್ತು ಪ್ರತ್ಯುಶಾ ಕುಂದರ್ ಇವರಿಂದ ಭರತನ್ಯಾಟ ಮತ್ತು ನೃತ್ಯ ಜರಗಿತು.

ಬಿ.ಕೆ ವರದರಾಯ ಪ್ರಭು ಸ್ವಾಗತಿಸಿದರು. ಸೇವಾಕೇಂದ್ರದ ಸಂಚಾಲಕಿ ಬಿ.ಕೆ ವಿಜಯಲಕ್ಷ್ಮಿ ವಂದಿಸಿದರು.