ಬೆಂಗಳೂರು: ಪ್ರಸ್ತಕ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಅದರಂತೆ ಜುಲೈ 19 ಮತ್ತು ಜುಲೈ 22 ರಂದು ಎರಡು ದಿನಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.
ಜುಲೈ 19ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ
ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ
ಪರೀಕ್ಷಾ ಸಮಯ:
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ
ಬುಧವಾರವೇ ಹಾಲ್ ಟಿಕೆಟ್ ಬಿಡುಗಡೆ
ಈ ಬಾರಿ 2 ದಿನ SSLC ಪರೀಕ್ಷೆ ನಡೆಯುತ್ತೆ
1ನೇ ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ
2ನೇ ದಿನ ಭಾಷಾ ವಿಷಯಗಳಿಗೆ ಪರೀಕ್ಷೆ
ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದೆ
ಬಹುಆಯ್ಕೆಯ ವಿಧಾನ ಪ್ರಶ್ನೆಪತ್ರಿಕೆ ಇರಲಿದೆ
ಪರೀಕ್ಷಾ ವಿಧಾನ:
ಒಂದು ಡೆಸ್ಕ್ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ
ಕೊಠಡಿಯಲ್ಲಿ 12 ಮಂದಿ ಮಾತ್ರ ಅವಕಾಶ
ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು 8.30 ಗಂಟೆಗೆ ಹಾಜರಾಗಿರುತ್ತಾರೆ
ಶಿಕ್ಷಕರಿಗೆ ಅನಾರೋಗ್ಯವಿದ್ದರೇ ಪರೀಕ್ಷಾ ಕರ್ತವ್ಯಕ್ಕೆ ತೆಗೆದುಕೊಳ್ಳೋದಿಲ್ಲ
ಮಕ್ಕಳಿಗೆ ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆ
ಪರೀಕ್ಷೆ ಹಾಗೂ ಪ್ರಶ್ನೆ ಪತ್ರಿಕೆ ಸರಳವಾಗಿರುತ್ತದೆ
ಜೂನ್ 30ಕ್ಕೆ ಮಕ್ಕಳಿಗೆ ಹಾಲ್ ಟಿಕೆಟ್ ನೀಡಲಾಗುತ್ತದೆ
ಕೊರೊನಾ ಲಕ್ಷಣಗಳಿರುವ ಮಕ್ಕಳಿಗೆ ಕೊರೊನಾ ಕೇರ್ ಸೆಂಟರ್ನಲ್ಲೇ ಪರೀಕ್ಷೆ
ಕೊಠಡಿಯ ಮೇಲ್ವಿಚಾರಕರು ಲಸಿಕೆ ಪಡೆದಿರಲೇ ಬೇಕು
ಎಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ನಿಗಾ ವಹಿಸುತ್ತಾರೆ












