ವೀಕೆಂಡ್ ವಿತ್ ರಮೇಶ್’ ಅಪಾರ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ.ಅಂತಿಮ ಘಟ್ಟ ತಲುಪಿರುವ ವೀಕೆಂಡ್ ವಿತ್ ರಮೇಶ್ ಶೋನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಗಮಿಸಲಿದ್ದಾರೆ
ಕನ್ನಡಿಗರ ಮನೆಗೆದ್ದಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಬಂದು ತಮ್ಮ ಸಾಧನೆಯ ಪುಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ.
‘ವೀಕೆಂಡ್ ವಿತ್ ರಮೇಶ್’ ಶೋನ ಈ ವಾರದ ಪ್ರೋಮೋ ರಿಲೀಸ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಪ್ರೋಮೋ ರಿಲೀಸ್ ಮಾಡಿರುವ ಜೀ ವಾಹಿನಿ, ”ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ! ವೀಕೆಂಡ್ ವಿತ್ ರಮೇಶ್ 5 ಗ್ರ್ಯಾಂಡ್ ಫಿನಾಲೆ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ” ಎಂದು ಬರೆದುಕೊಂಡಿದೆ.
ಶಿವಕುಮಾರ್ ಅವ್ರು ಒಳ್ಳೆಯ ಆಡಳಿತಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಣಗಾನ ಮಾಡಿರೋದು ಜನರ ಗಮನ ಸೆಳೆಯುತ್ತಿದೆ.
‘ವೀಕೆಂಡ್ ವಿತ್ ರಮೇಶ್’ ಸೀಸನ್ 5 ಕೊನೆಯ ಹಂತ ತಲುಪಿದ್ದು, ಅಂತಿಮ ವಾರ ಯಾರು ಬರಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಈ ವಾರ ರಾಜ್ಯದ ನೂತನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಾಧಕರ ಕುರ್ಚಿ ಏರಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿ ಅವರ ಕಾರ್ಯಕ್ರಮ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.