ಬೆಂಗಳೂರು: ಚಿತ್ರಪ್ರೇಮಿಗಳು ಬಹಳಷ್ಟು ನಿರೀಕ್ಷೆಯಿಂದ ಕಾಯುತ್ತಿರುವ “ಕೆಜಿಎಫ್ ಚಾಪ್ಟರ್ -2” ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
2021ರ ಜನವರಿ 8ರಂದು ರಾಕಿ ಬಾಯ್ ಯಶ್ ನಟನೆಯ “ಕೆಜಿಎಫ್ ಚಾಪ್ಟರ್-2” ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಘೋಷಿಸಿದ್ದಾರೆ.
ಅಂದು ಬೆಳಿಗ್ಗೆ 10ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್ನಲ್ಲಿ ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.