ಉಡುಪಿ: ರಂಗಸ್ಪಂದನ ಬಳಗ ನರಸಿಂಗೆ ಇವರ ಆಶ್ರಯದಲ್ಲಿ ‘ರಂಗದಲ್ಲಿ ಕಲೆ, ಹೃದಯದಲ್ಲಿ ನೆಲೆ’ ಎಂಬ ಧ್ಯೇಯವಾಕ್ಯದೊಂದಿಗೆ ನವೆಂಬರ್ 20ರ ಶುಕ್ರವಾರ ಶ್ರೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ.
ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದವರಿಂದ ರಾತ್ರಿ 7 ಗಂಟೆಗೆ ‘ಚತುರ್ಜನ್ಮ ಮೋಕ್ಷ’ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಯಕ್ಷಗಾನಾಸಕ್ತರು ಹಾಗೂ ಸಾರ್ವಜನಿಕರಿಗೆ ಆದರದ ಸ್ವಾಗತ ಕೋರಲಾಗಿದೆ.















