ಹೊಸಬರ ಅನುಕ್ತ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರ ಒಂದೆಡೆ ದೈವಾರಾಧನೆ ಮತ್ತೊಂದೆಡೆ ಮರ್ಡರ್ ಮಿಸ್ಟರಿ ಅವೆರಡನ್ನು ಹೊಂದಿಸಿ ಹೊಸದೊಂದು ಕತೆ ಹೇಳ ಹೊರಟ ಚಿತ್ರ ಅನುಕ್ತ. ಬಿಡುಗಡೆಯಾದ ಎರಡೇ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಟ್ರೈಲರ್ ವೈರಲ್ ಆಗಿದ್ದು. ಹೊಸಬರ ಸಿನಿಮಾ ಟ್ರೈಲರ್ ಈ ಪರಿ ಸದ್ದು ಮಾಡುತ್ತಿರುವುದು ಸಿನಿಮಾದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ.
ಈ ಹಿಂದೆ ಸದ್ದು ಮಾಡಿದ್ದ ರಂಗಿತರಂಗ ಹಾಗೂ ಉಳಿದವರು ಕಂಡಂತೆ ಚಿತ್ರಗಳಂತೆ ಅನುಕ್ತ ಚಿತ್ರದ ಟ್ರೈಲರ್ ಕಾಣಿಸಿಕೊಂಡರು. ಇದು ರೋಚಕವಾದ ಮತ್ತೊಂದು ಕತೆ ಹೇಳಲು ಹೊರಟಿದೆ. ಅನುಕ್ತ ಎಂಬ ಶೀರ್ಷಿಕೆಗೆ ಸಂಸ್ಕೃತದಲ್ಲಿ ‘ಹೇಳಲಾಗದ ಸಂಗತಿ’ ಎಂಬ ಅರ್ಥ ಇದೆ. ಒಂದು ರೀತಿಯಲ್ಲಿ ಆಂಟೋಲ್ಡ್ ಸ್ಟೋರಿ ಹಾಗೂ ಅನ್ಸೆಟ್ ಸ್ಟೋರಿ ಅಂತಲೂ ಹೌದು.
1992ರಲ್ಲಿ ಕರಾವಳಿಯಾಲ್ಲಿ ಸಾಕಷ್ಟು ಸುದ್ದಿಯಾಯಿತು ಎನ್ನಲಾದ ಅನುಪಮಾ ಶೆಟ್ಟಿ ಹತ್ಯೆ ಪ್ರಕರಣದ ಕನೆಕ್ಷನ್ ಕಥೆಯ ಬಹು ಪದರ ಹೀಗೆ ಸಾಗುತ್ತವೆ ಟ್ರೈಲರ್ ಹಾಗೊಂದು ಕುತೂಹಲಕ್ಕೆ ಕಾರಣವಾಗಿದೆ. ದುಬೈನಲ್ಲಿರುವ ಉಡುಪಿ ಮೂಲದ ಹರಿ ಬಂಗೇರ ನಿರ್ಮಾಣದಲ್ಲಿ ಅಶ್ವತ್ ಸ್ಯಾಮ್ಯುಯೆಲ್ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರದ ನಾಯಕನಾಗಿ ಕಾರ್ತಿಕ್ ಅತ್ತಾವರ ಕಾಣಿಸಿಕೊಂಡಿದ್ದು, ಸಂಗೀತ ಭಟ್ ನಾಯಕಿ, ಅನು ಪ್ರಭಾಕರ್, ಸಂಪತ್ ರಾಜ್, ಅಚ್ಚುತ್ ಕುಮಾರ್, ಅಂಕಿತ್ ಮತ್ತಿತರರು ಚಿತ್ರದಲ್ಲಿದ್ದಾರೆ.