ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಿದ ಕೀರ್ತಿ ಡಾಕ್ಟರ್ ಸತೀಶ್ ಹೊಸಮನಿ ಸಲ್ಲುತ್ತದೆ: ರಮಾನಂದ ಗುರೂಜಿ

ಹೊಸಪೇಟೆ: ಜ್ಞಾನಭಂಡಾರಗಳೆನಿಸಿದ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಿ ಪ್ರತಿಯೊಬ್ಬರಿಗೂ ದೊರಕುವಂತೆ ಮಾಡಿದ ಕೀರ್ತಿ ಡಾಕ್ಟರ್ ಸತೀಶ ಹೊಸಮನಿ ಅವರಿಗೆ ಲಭಿಸುತ್ತದೆ. ಇವರ ಸಾಧನೆ ಎಲ್ಲರಿಗೂ ಮಾದರಿಯಾಗಲಿ ಎಂದು ರಮಾನಂದ ಗುರೂಜಿ ಹೇಳಿದರು.

ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಸಾಂಸ್ಕೃತಿಕ ಲೋಕೋತ್ಸವ 2022 ಹಾಗೂ ಜುಲೈ 31ರ೦ದು ನೆರವೇರಲಿರುವ ವಿಜಯನಗರ ಕರ್ನಾಟಕ 4 ನೇ ಸಾಂಸ್ಕೃತಿಕ ಸಮ್ಮೇಳನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಹೊಸಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಡಾಕ್ಟರ್ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ರಮಾನಂದ ಗುರೂಜೀ ಹಾಗೂ ಸಮ್ಮೇಳನಾಧ್ಯಕ್ಷ ಸತೀಶ ಹೊಸಮನಿ ಜಂಟಿಯಾಗಿ ಮಾಲಾರ್ಪಣೆಗೈದು ಗೌರವ ಸಮರ್ಪಿಸಿದರು .

ಈ ಸಂದರ್ಭದಲ್ಲಿ ವೈವಾಹಿಕ ರಜತ ಸಂಭ್ರಮದಲ್ಲಿರುವ ಶ್ರೀ ರಮಾನಂದ ಗುರೂಜಿ ದಂಪತಿಗಳನ್ನು ಅಪಾರ ಭಕ್ತ ಸಮೂಹ ಆದರ್ಶ ದಂಪತಿ ಪ್ರಶಸ್ತಿ ಯನ್ನು ನೀಡಿ ಗೌರವಿಸಿತು.

ರುದ್ರಪ್ಪ ಭಂಡಾರಿ ಅವರ ನೇತೃತ್ವದಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ  ಕೊಪ್ಪಳದ ಮಹಾನ್ ಸಾಹಿತಿ ಡಾಕ್ಟರ್ ಮಹಾಂತೇಶ ಮಲ್ಲನಗೌಡ, ಡಾಕ್ಟರ್ ಸಾವಿತ್ರಿ ಮಜುಮದಾರ ಲೇಖಕರು ಹಾಗೂ ಪತ್ರಕರ್ತರು ಡಾಕ್ಟರ್ ಎಂ ಗುಡಿಮನಿ ಉಪ ಗ್ರಂಥಪಾಲಕರು ಕನ್ನಡ ವಿಶ್ವವಿದ್ಯಾಲಯ ಹಂಪಿ, ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಅಮರೇಗೌಡ ಬಯ್ಯಾಪುರ ಪ್ರಗತಿಪರ ರೈತ ಸಂಘದ ಗೌರವ ಅಧ್ಯಕ್ಷ ಪಂಪನಗೌಡ, ಹಿರಿಯ ಪತ್ರಕರ್ತ ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ, ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್, ಉದ್ಯಮಿ ಆನಂದ ಬಾಯರಿ ಉಪಸ್ಥಿತರಿದ್ದರು.