ಕೋವಿಡ್ ಲಸಿಕೆಯ ಪ್ರಮಾಣ ಪತ್ರವನ್ನು ಇದೀಗ ಸುಲಭ ವಿಧಾನದ ಮೂಲಕ ಪಡೆಯಬಹುದು. ಅದಕ್ಕಾಗಿ ಹೆಚ್ಚು ಒದ್ದಾಟ ನಡೆಸುವ ಅವಶ್ಯಕತೆ ಇಲ್ಲ. ಪ್ರಮಾಣ ಪತ್ರ ಪಡೆಯಲು ನೀವು ಮಾಡಬೇಕಾದದ್ದು ಇಷ್ಟೇ.
ಈ ಕೆಳಗಿನ ಮೊಬೈಲ್ ನಂಬರನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ.
90131 51515
ಬಳಿಕ ವ್ಯಾಟ್ಸಪ್ ನಲ್ಲಿ Certificate ಅಂತ ಟೈಪ್ ಮಾಡಿ ಮೇಲಿನ ನಂಬರ್ ಗೆ ಕಳುಹಿಸಬೇಕು. ಆಗ ನಿಮ್ಮ ಮೊಬೈಲ್ ಒಟಿಪಿ ಬರುತ್ತದೆ. ಅದನ್ನು ಕಳುಹಿಸಬೇಕು. ಆದಾದ ಬಳಿಕ ನೀವು ಪಡೆದ ಕೋವಿಡ್ ಲಸಿಕೆಯ ಪ್ರಮಾಣ ಪತ್ರವು (ಸರ್ಟಿಫಿಕೆಟ್) ತಕ್ಷಣ ಬರುತ್ತದೆ.
ನೀವು ಪ್ರಯಾಣಿಸುತ್ತಿರುವಾಗ ಅಥವಾ ಇತರ ಸಂದರ್ಭಗಳಲ್ಲಿ ಇದು ನಿಮಗೆ ತುರ್ತಾಗಿ ಬೇಕಾಗಬಹುದು.