ಸೆಪ್ಟೆಂಬರ್ ನಿಂದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಬಹುದು: ಐಸಿಎಂಆರ್ ನಿರ್ದೇಶಕಿ

ಪುಣೆ: ಸೆಪ್ಟೆಂಬರ್ ತಿಂಗಳಿನಿಂದ 2-18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ಇದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಪುಣೆ) ನಿರ್ದೇಶಕಿ ಪ್ರಿಯಾ ಅಬ್ರಾಹಂ ಅವರು, ಮಕ್ಕಳಿಗೆ ಕೊವಿಡ್​ 19 ಲಸಿಕೆ ನೀಡುವ ಸಂಬಂಧ ಸದ್ಯ 2 ಮತ್ತು 3ನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಯುತ್ತಿದ್ದು, ಅದು ಸಂಪೂರ್ಣಗೊಂಡ ನಂತರ ಸೆಪ್ಟೆಂಬರ್​​ನಿಂದ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಏಮ್ಸ್​ ನಿರ್ದೇಶಕ ರಣದೀಪ್​ ಗುಲೇರಿಯಾ ಕೂಡ ಸೆಪ್ಟೆಂಬರ್​​ ಅಷ್ಟೊತ್ತಿಗೆ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ. ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಸೆಪ್ಟೆಂಬರ್​ನಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿದ್ದರು.