ಕೃಷಿಕ ದಂಪತಿ ನೇಣಿಗೆ ಶರಣು: ಕಾರಣ ನಿಗೂಢ

ಪುತ್ತೂರು: ಕೃಷಿಕ ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಪಾದೆಕರ್ಯದಲ್ಲಿ ಎಂಬಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಭಟ್ (84) ಹಾಗೂ ಶಾರದಾ ಭಟ್ (78) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇಬ್ಬರೂ ಭಾನುವಾರ ರಾತ್ರಿ ಊಟ ಮಾಡಿ ಮನೆಯ ಕೆಳಗಿನ ಅಂತಸ್ತಿನ ಕೋಣೆಯಲ್ಲಿ ಮಲಗಿದ್ದರು.

ಪುತ್ರ, ಅವರ ಪತ್ನಿ ಮತ್ತು ಮಕ್ಕಳು ಮಹಡಿಯ ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ರಾತ್ರಿ ಎಲ್ಲರು ಮಲಗಿದ ನಂತರ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌ ಎನ್ನಲಾಗಿದೆ. ಆತ್ಮಹತ್ಯೆಯ ಕಾರಣ ನಿಗೂಢವಾಗಿದೆ. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.