ಉಡುಪಿ: ಮುಂಬೈನಿಂದ ಉಡುಪಿಗೆ ಬಂದ ಮೂವರು ಮಕ್ಕಳು ಸೇರಿದಂತೆ ಇಂದು ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು 18 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ರಾಜ್ಯ ಕುಟುಂಬ ಮತ್ತು ಆರೋಗ್ಯ ಇಲಾಖೆಯ ಮಧ್ಯಾಹ್ನದ ಕೊರೊನಾ ಬುಲೆಟಿನ್ ನಲ್ಲಿ ತಿಳಿದುಬಂದಿದೆ.
ಮುಂಬೈನಿಂದ ಬಂದಿದ್ದ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಪೊಲೀಸರಿಗೆ ಸೋಂಕು ತಗುಲಿದ್ದು, ಇದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.
ಮುಂಬೈನಿಂದ ಉಡುಪಿಗೆ ಬಂದ 35 ವರ್ಷದ ಮಹಿಳೆ, 32 ವರ್ಷದ ಪುರುಷ, 1 ವರ್ಷದ, 4 ವರ್ಷದ ಮತ್ತು 4 ವರ್ಷದ ಮೂವರು ಮಕ್ಕಳು, 50 ವರ್ಷದ ಪುರುಷ, 37 ವರ್ಷದ ಪುರುಷ, 26 ವರ್ಷದ ಯುವಕ, 24 ವರ್ಷದ ಯುವತಿ, 35 ವರ್ಷದ ಮಹಿಳೆ, 29 ವರ್ಷದ ಮಹಿಳೆ, 48 ವರ್ಷದ ಪುರುಷ, 23 ವರ್ಷದ ಯುವತಿ ಹಾಗೂ ಮೂವರು ಕಂಟೈನ್ ಮೆಂಟ್ ಜೋನ್ ಸಂಪರ್ಕಿತರು ಮತ್ತು ಇಬ್ಬರಿಗೆ ಯಾವ ರೀತಿ ಸೋಂಕು ತಗುಲಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.