ಮಂಗಳೂರು ನಗರಕ್ಕೂ ವಕ್ಕರಿಸಿತು ಕೊರೋನಾ ಹೆಮ್ಮಾರಿ: ಇಬ್ಬರಿಗೆ ಕೊರೋನಾ ಸೋಂಕು ದೃಡ

ಮಂಗಳೂರು: ಇದೀಗ ಮಂಗಳೂರು ನಗರಕ್ಕೂ ಕೊರೋನಾ ಮಹಾಮಾರಿ ವಕ್ಕರಿಸಿದದ್ದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಇಬ್ಬರಿಗೆ ಕೊರೋನಾ ಪಾಸಿಟಿವ್ ದಾಖಲಾಗಿದೆ. 80 ವರ್ಷದ ತಾಯಿ‌ ಮತ್ತು 45 ವರ್ಷದ ಮಗನಲ್ಲಿ  ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಡೀಲ್ ಬಳಿಯ ಆಸ್ಪತ್ರೆ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ತಾಯಿ ಮತ್ತು ಆಕೆಯ ಆರೈಕೆಗೆ ಇದ್ದ ಮಗನಿಗೆ ಪಾಸಿಟಿವ್ ದೃಢಪಟ್ಟಿದೆ.

ಇವರು  ಮಂಗಳೂರಿನ ಕುಲಶೇಖರ ಎಂಬಲ್ಲಿನ ನಿವಾಸಿಗಳು ಎನ್ನಲಾಗಿದೆ.ಈ ರೋಗಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ದೆಯ ಪಕ್ಕದ ಬೆಡ್ ನಲ್ಲಿದ್ದವರು ಎಂದು ತಿಳಿದುಬಂದಿದೆ.

ಎ.21ರಂದು ಮೃತಪಟ್ಟಿದ್ದ P-432 ವೃದ್ದೆಯ ಸಂಪರ್ಕದಿಂದ ಸೋಂಕು ಹರಡಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ದೆ ಎ.23ರಂದು ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರು. ಸದ್ಯ ಮೃತ ವೃದ್ದೆ ಸಂಪರ್ಕದಿಂದ ಆಸ್ಪತ್ರೆಯಲ್ಲಿ 3 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಎ.23 ರಂದೇ ಸಂಪೂರ್ಣ ಸೀಲ್ ಡೌನ್ ಆಗಿರುವ ಫಸ್ಟ್ ನ್ಯೂರೋ  ಆಸ್ಪತ್ರೆಯ 190 ಸಿಬ್ಬಂದಿ ಸಹಿತ 200 ಕ್ಕೂ ಅಧಿಕ ಜನರ ತಪಾಸಣೆ ಮಾಡಲಾಗಿದೆ. ಸದ್ಯ ಎಲ್ಲರೂ ಕ್ವಾರೆಂಟೈನ್ ನಲ್ಲಿದ್ದು, ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.ಸದ್ಯ ದ.ಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಇದರಲ್ಲಿ 12 ಡಿಸ್ಚಾರ್ಜ್, 2 ಸಾವು ಮತ್ತು 7 ಮಂದಿಗೆ ಚಿಕಿತ್ಸೆ ನೀಡಲಾಗಿದೆ.ಖಾಸಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಶಕ್ತಿನಗರದ ಮಹಿಳೆ ಹಾಗೂ ಅವರ ಮಗನಿಗೆ ಕೊರೊನ ಚಿಕಿತ್ಸೆ ನೀಡಲಾಗುತ್ತಿದೆ. ಶಕ್ತಿನಗರದ ಅವರ ಮನೆಯ ಸುತ್ತ ಮುತ್ತ ಸೀಲ್ ಡೌನ್ ಮಾಡಲಾಗಿದೆ.