ದ.ಕ‌. ಜಿಲ್ಲೆಯಲ್ಲಿ‌ ಮತ್ತೆರಡು‌ ಕೊರೊನಾ ಪಾಸಿಟಿವ್; ಪಸ್ಟ್‌ ನ್ಯೂರೊ ಆಸ್ಪತ್ರೆಯಿಂದ ಕಾರ್ಕಳದ ಇಬ್ಬರಿಗೆ ಹರಡಿತು ಸೋಂಕು

ಮಂಗಳೂರು: ಫಸ್ಟ್ ನ್ಯೂರೊ ಆಸ್ಪತ್ರೆಯಿಂದ ಮತ್ತೆ ಇಬ್ಬರಿಗೆ ಸೋಂಕು ಹರಡಿರುವುದು ಇಂದು ಪತ್ತೆಯಾಗಿದೆ. ಉಡುಪಿ ಮೂಲದ ಇಬ್ಬರಿಗೆ ಸೋಂಕು ದೃಢ ಪಟ್ಟಿದೆ.
50 ವರ್ಷದ ಮಹಿಳೆ ಮತ್ತು 26 ವರ್ಷದ ಯುವಕನಿಗೆ ಕೊರೋನಾ ಸೋಂಕು ಕಂಡು ಬಂದಿದೆ.
ಈ ಇಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ತನಿಖೆ ವೇಳೆ ಚಿಕಿತ್ಸೆ ಪಡೆದಿದ್ದವರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕ್ವಾರಂಟೈನ್ ನಲ್ಲಿ ಇಟ್ಟು ಪರೀಕ್ಷೆ ಮಾಡಲಾಗಿತ್ತು. P-507 ರ ಸಂಪರ್ಕದಿಂದ ಇಬ್ಬರಿಗೂ ಸೋಂಕು ಎನ್ನಲಾಗಿದೆ.ಸೋಂಕಿತರಿಬ್ಬರು ಕಾರ್ಕಳ ಮೂಲದವರು ಎನ್ನುವುದು ತಿಳಿದುಬಂದಿದೆ.