ಲಾಕ್ ಡೌನ್ ಬಳಿಕ ಮಂಗಳೂರಿಗೆ ಬಂದ ಮೊದಲ ಅಂತರಾಷ್ಟ್ರೀಯ ವಿಮಾನ: 176 ಮಂದಿ ಆಗಮನ

ಮಂಗಳೂರು: ಲಾಕ್ ಡೌನ್ ಬಳಿಕ‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಮೊದಲ ವಿಮಾನ ಮಂಗಳವಾರ ರಾತ್ರಿ ಬಂದಿಳಿಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ರಾತ್ರಿ 10.10 ಕ್ಕೆ ಲ್ಯಾಂಡ್‌ ಆಯಿತು. ಬಳಿಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ […]

ಹಿರಿಯ ಪತ್ರಕರ್ತೆ ಡಾ.ಸೀತಾಲಕ್ಷ್ಮೀ ಕರ್ಕಿಕೋಡಿ ನಿಧನ

ಮಂಗಳೂರು:  ಹಿರಿಯ ಪತ್ರಕರ್ತೆ  ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಮಂಗಳೂರಿನ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು. ಅವರು ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಹಲವು ವರ್ಷಗಳಿಂದ ತಂದೆ, ಸಾಹಿತಿ ವಿ.ಗ ನಾಯಕ ಮತ್ತು ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ‌ ಉಪ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಕುಟುಂಬ ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿಯವರು. ಪ್ರತಿಭಾನ್ವಿತೆಯಾಗಿದ್ದ ಸೀತಾ, ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು.

ಅಡಿಕೆಯಲ್ಲಿ ಸಿಂಗಾರ ಒಣಗುವ ರೋಗ ಮತ್ತು ಕಾಯಿ ಉದುರುವಿಕೆಯನ್ನು ನಿಯಂತ್ರಿಸುವ ಕ್ರಮಗಳು

ಉಡುಪಿ ಮೇ 12: ಅಡಿಕೆಯಲ್ಲಿ ಸಣ್ಣ ಕಾಯಿಗಳು ಉದುರುವುದು ಸಾಮಾನ್ಯವಾಗಿ ಕಾಣುತ್ತಿದ್ದು, ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. 1) ಸರಿಯಾದ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ನೀರನ್ನು ಒದಗಿಸುವುದು: ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಮಾರ್ಚ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಗಿಡಕ್ಕೆ, 15ರಿಂದ 20 ಲೀಟರ್ ನೀರನ್ನು ಹನಿ ನೀರಾವರಿ ಮುಖಾಂತರ ನೀಡಬೇಕಾಗುತ್ತದೆ. ಬುಡದಲ್ಲಿ ತೇವಾಂಶ ಕಡಿಮೆಯಾದಾಗ ಹರಳುಗಳು ಉದುರುವುದು ಸಾಮಾನ್ಯ. 2) ಸಮಗ್ರ ಪೋಷಕಾಂಶ ಮತ್ತು ಹುಳಿ ಮಣ್ಣು ನಿರ್ವಹಣೆ: ಮಣ್ಣಿನ ಪರೀಕ್ಷೆಯ ಅನುಗುಣವಾಗಿ ಶಿಫಾರಸ್ಸು […]

ನಾಳೆಯಿಂದ ಉಡುಪಿ ಜಿಲ್ಲೆಯಲ್ಲಿ ಕೇಳಲಿದೆ ಬಸ್ ಹಾರ್ನ್: ಬಸ್ ಸಂಚಾರಕ್ಕೆ ಡಿ.ಸಿ ಆದೇಶ

ಉಡುಪಿ ಮೇ 12: ರಾಜ್ಯದಲ್ಲಿ ಕೋರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದಿಂದ ನಿರ್ದೇಶನ ಮತ್ತು ಆದೇಶ ನೀಡಿರುವುದಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಕೋರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ಜಿಲ್ಲೆಯಾದ್ಯಂತ ಹಲವು ನಿರ್ಭಂದ ಹಾಗೂ ವಿನಾಯಿತಿಗಳನ್ನು ಒಳಗೊಂಡು ನಿರ್ಭಂಧಾಜ್ಞೆಯನ್ನು ಸಡಿಲಿಸಿ ಪ್ರತಿ ಬೆಳಗ್ಗೆ 7 ಗಂಟೆಯಿoದ ರಾತ್ರಿ 7 ಗಂಟೆಯವರೆಗೆ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರಕಾರ ಇವರ ಆದೇಶದಲ್ಲಿ […]

ಉಡುಪಿ ಪ್ರಸನ್ನ ಹಾರ್ಟ್ ಹಾಸ್ಪಿಟಲ್ಸ್ ನಲ್ಲಿ ಪ್ರಥಮ ಬಾರಿಗೆ ಬ್ಲಾಗ್ ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ ಚಿಕಿತ್ಸೆ(EECP) ಪ್ರಾರಂಭ

ಉಡುಪಿ: ಉಡುಪಿ ಬ್ರಹ್ಮಗಿರಿಗೆ ಸಮೀಪವಿರುವ ಪ್ರಸನ್ನ ಹಾರ್ಟ್ ಹಾಸ್ಪಿಟಲ್ ನಲ್ಲಿ ಇದೇ ಮೊದಲ ಬಾರಿಗೆ ಬ್ಲಾಗ್’ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ ಚಿಕಿತ್ಸೆ(EECP)ಯನ್ನು ಪ್ರಾರಂಭಿಸಲಾಗಿದೆ. ಎದೆ ಮತ್ತು ಭುಜದ ಭಾಗದಲ್ಲಿ ನಿರಂತರ ನೋವಿದ್ದರೆ, ಎದೆಬಡಿತ ನಿಧನವಾಗಿದ್ದರೆ, ಎಂಜಿಯೋಪ್ಲಾಸ್ಟ್ ಅಥವಾ ಬೈಪಾಸ್ ಬಳಿಕವೂ ಸಮಸ್ಯೆ ಇದ್ದರೆ, ಹಾರ್ಟ್ ಎಟ್ಯಾಕ್ (ಹೃದಯ ಸ್ಥಂಭನ) ಆಗಿದ್ದು, ನಡೆಯುವಾಗ ಸಮಸ್ಯೆ ಅಥವಾ ಹೃದಯಭಾರದ ಅನುಭೂತಿ ಇದ್ದರೆ, ವ್ಯಕ್ತಿಯ ಎಂಗಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಚಿಕಿತ್ಸೆಗೆ ಸೂಕ್ತವಾಗಿರದಿದ್ದರೆ, ಇಲ್ಲಿ ಚಿಕಿತ್ಸೆ ಲಭ್ಯವಿದೆ. ಸುರಕ್ಷಿತ ಚಿಕಿತ್ಸೆ: ಆಸ್ಪತ್ರೆಗೆ ದಾಖಲಾಗದೆ, […]