ಜ. 8ರಂದು ಆರ್ ಬಿಐ ನಿರ್ದೇಶಕ ಸತೀಶ್ ಮರಾಠೆ ಅವರೊಂದಿಗೆ ಸಂವಾದ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ಆಶ್ರಯದಲ್ಲಿ ‘ಭಾರತದಲ್ಲಿ ಪ್ರಸ್ತುತ ಆರ್ಥಿಕತೆ ಮತ್ತು ಬ್ಯಾಂಕಿಂಗ್ ಸನ್ನಿವೇಶ’ (Present Economy and Banking Scenario in India) ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕ ಸತೀಶ್ ಮರಾಠೆ ಅವರೊಂದಿಗೆ ಸಂವಾದ ಕಾರ್ಯಕ್ರಮ ಉಡುಪಿ ಡಯಾನ ಹೋಟೆಲ್ ಸಭಾಂಗಣದಲ್ಲಿ ಜನವರಿ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಯಶ್‍ಪಾಲ್ ಸುವರ್ಣ ತಿಳಿಸಿದ್ದಾರೆ.

ಈ ಸಂವಾದದಲ್ಲಿ ಸತೀಶ್ ಮರಾಠೆ ಅವರು ಕೊರೊನಾ ಮಹಾಮಾರಿಯ ಪರಿಣಾಮದಿಂದ ದೇಶದ ಬ್ಯಾಂಕಿಂಗ್ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಹಾಗೂ ದೇಶದ ಆರ್ಥಿಕತೆಯ ಮೇಲಿನ ಪರಿಣಾಮಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ವೈದ್ಯರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಚೇಂಬರ್ ಆಫ್‍ಕಾಮರ್ಸ್, ಆದಾಯ ತೆರಿಗೆ ಇಲಾಖೆ, ಸಹಕಾರಿ ಮುಖಂಡರು, ಬ್ಯಾಂಕಿಂಗ್, ಶಿಕ್ಷಣ ಸಂಸ್ಥೆ, ರಿಯಲ್‍ಎಸ್ಟೇಟ್, ಜ್ಯುವೆಲ್ಲರ್ಸ್, ವಕೀಲರು, ಚಾರ್ಟೆಡ್‍ಅಕೌಂಟೆಟ್, ಮತ್ಸ್ಯೋದ್ಯಮಿಗಳು, ಮಾಧ್ಯಮ, ಪ್ರವಾಸೋದ್ಯಮ, ಹೊಟೇಲ್, ಸಾರಿಗೆ, ಇಂಜಿನಿಯರ್ ಅಸೋಸಿಯೇಶನ್ ಮೊದಲಾದ ಹಲವು ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.