ಮೈಸೂರು : ಅಪ್ಪು (ಪುನೀತ್ ರಾಜ್ಕುಮಾರ್) ಅಭಿಮಾನಿಯೊಬ್ಬರು ಮೈಸೂರಿನಲ್ಲಿ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.
ದಿ. ಪುನೀತ್ ರಾಜ್ಕುಮಾರ್ ಅವರು ಇಹಲೋಕ ತ್ಯಜಿಸಿ ಒಂದೂವರೆ ವರ್ಷ ಕಳೆಯುತ್ತಿದೆ. ನಟನ ಅಭಿಮಾನಿಗಳು ಒಂದಲ್ಲೊಂದು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಅಪ್ಪು ಅಮರ ಎಂದು ಜಗತ್ತಿಗೆ ಸಾರುತ್ತಿದ್ದಾರೆ.
ಟಿ. ನರಸೀಪುರ ಬಳಿಯ ಮೇದಿನಿ ಗ್ರಾಮದ ಎಂ.ಎನ್.ಕುಮಾರ್ ಎಂಬವರು ಗ್ರಂಥಾಲಯ ನಿರ್ಮಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅಪ್ಪುವಿನ ಅಪ್ಪಟ ಅಭಿಮಾನಿಯಾಗಿರುವ ಇವರು ಅವರ ನೆನಪಿಗೋಸ್ಕರ 10 ಲಕ್ಷ ರೂಪಾಯಿ ಖರ್ಚಿನಲ್ಲಿ ಗ್ರಂಥಾಲಯ ಕಟ್ಟಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಎಂ.ಎನ್.ಕುಮಾರ್, “ನನಗೆ ಪುನೀತ್ ಎಂದರೆ ಪ್ರಾಣ. ಅವರ ನೆನಪು ಸದಾ ನಮ್ಮ ಜೊತೆಗಿರಬೇಕೆಂಬ ಉದ್ದೇಶದಿಂದ ಗ್ರಂಥಾಲಯ ನಿರ್ಮಾಣ ಮಾಡಿದ್ದೇನೆ.
ಅವರ ಪುತ್ಥಳಿಯನ್ನೂ ನಿರ್ಮಿಸಿದ್ದೇನೆ. ಗ್ರಂಥಾಲಯದಿಂದ ಬಡ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಹುಡುಕುವ ಯುವಕರಿಗೆ ಅನುಕೂಲ ಆಗಲಿದೆ” ಎಂದು ಹೇಳಿದರು.ಮೈಸೂರಿನ ಗ್ರಾಮವೊಂದರಲ್ಲಿ ನಟನ ಅಭಿಮಾನಿಯೊಬ್ಬರು ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ನಿರ್ಮಿಸಿದ್ದಾರೆ.
ಈ ಮೂಲಕ ಅಕ್ಷರ ದಾಸೋಹಕ್ಕೆ ಮುಂದಾಗಿದ್ದಾರೆ. ಅಪ್ಪು ಪುತ್ಥಳಿಯನ್ನೂ ನಿರ್ಮಾಣ ಮಾಡಿದ್ದಾರೆ.