ಮಂಗಳೂರು: ಕೊವಿಡ್ 19 ಸಮಯದಲ್ಲೂ ಕಾಂಗ್ರೆಸ್ ಪಕ್ಷದ ನೀಚ ರಾಜಕೀಯ ಖಂಡನೀಯ ಎಂದು ಬಿಜೆಪಿ ರಾಜ್ಯಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಪಿಎಂ ಕೇರ್ ಪಂಡ್ ಬಗ್ಗೆ ಕಾಂಗ್ರೆಸ್ ಮಾಡಿರುವ ಟ್ವೀಟ್ ಆಧಾರ ರಹಿತವಾಗಿದ್ದು, ಕಾಂಗ್ರೆಸ್ ಪಕ್ಷದ ದಿವಾಳಿತನಕ್ಕೆ ಇದು ಸಾಕ್ಷಿ. ಪ್ರಧಾನ ಮಂತ್ರಿ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟು ಮಾಡುವುದು ಅತ್ಯಂತ ಖಂಡನಿಯ. ಯಾವುದೇ ಆಧಾರವಿಲ್ಲದೇ ಪುಂಕಾನೆ ಪುಂಕಾ ಮಾತನಾಡುವದೇ ಕಾಂಗ್ರೆಸ್ ನ ಚಾಳಿಯಾಗಿದೆ ಎಂದು ಟೀಕಿಸಿದ್ದಾರೆ.
ನಿಜವಾಗಿ ಕೊವಿಡ್ ಸಮಯದಲ್ಲಿ ಎಲ್ಲರೂ ಒಂದಾಗಿ ಕೊರೊನಾ ವಿರುದ್ದ ಹೊರಡಬೇಕು.
ಆದರೆ ಕಾಂಗ್ರೆಸ್ ವಲಸೆ ಕಾರ್ಮಿಕರನ್ನ ಬಿದಿಗಿಳಿಸುವುದು, ಜನರಿಗೆ ತಪ್ಪು ದಾರಿ ತೊರಿಸುವಂತ ಕೆಲಸ ಮಾಡುತ್ತಿದೆ. ಟ್ಟಿಟ್ ಮಾಡಿದ್ದಕೆ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಯಲ್ಲಿ ಸೊನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಸ್ ಹಿಂಪಡೆಯ ಬೇಕು ಠಾಣಾ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಡಿ.ಕೆ.ಶಿ ಒತ್ತಾಯಿಸಿದ್ದಾರೆ. ಆದರೆ ಠಾಣಾ ಅಧಿಕಾರಿ ಪ್ರವೀಣ್ ಕೇಸ್ ದಾಖಲು ಮಾಡಿಕೊಂಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯ ಬಾರದು. ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ದ ಕಠಿಣ ಕ್ರಮ ವಹಿಸಬೇಕು. ಡಿ.ಕೆ ಶಿವಕುಮಾರ್ ಗೆ ಜನರ ಮೇಲೆ ಕಾಳಜಿ ಇದ್ದರೆ ಸರಕಾರಕ್ಕೆ ಸಹಕಾರ ನಿಡಬೇಕು ಎಂದು ನಳಿನ್ ತಿಳಿಸಿದ್ದಾರೆ.