ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವರು 47 ಜನರ ಸ್ಟೀರಿಂಗ್ ಸಮಿತಿ ರಚಿಸಿದ್ದು, ಇದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದೆ.
ಸಮಿತಿಯ ಪಟ್ಟಿಯಲ್ಲಿ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮನಮೋಹನ್ ಸಿಂಗ್, ಎ.ಕೆ ಆಂಟನಿ, ಜೈರಾಮ್ ರಮೇಶ್, ರಣದೀಪ್ ಸುರ್ಜೇವಾಲ, ಅಂಬಿಕಾ ಸೋನಿ, ಅಜಯ್ ಮಾಕನ್, ಹರೀಶ್ ರಾವತ್, ಅಭಿಷೇಕ್ ಮನು ಸಿಂಘ್ವಿ ಮುಂತಾದವರಿದ್ದಾರೆ. ಕಾಂಗ್ರೆಸ್ ಪುನರುಜ್ಜೀವನಕ್ಕಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 ಬಣದ ಆನಂದ್ ಶರ್ಮಾ ಕೂಡಾ ಸಮಿತಿಯಲ್ಲಿ ಜಾಗ ಪಡೆದಿದ್ದಾರೆ.
As per Article XV (b) of the Constitution of the Indian National Congress,
the Congress President has constituted the Steering Committee which would function in place of the Congress Working Committee.
The list of the members of the Steering Committee is enclosed herewith. pic.twitter.com/hjz89Dg7JK
— INC Sandesh (@INCSandesh) October 26, 2022
ಗಮನಾರ್ಹ ವಿಚಾರವೆಂದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿ ತರೂರ್ ಅವರಿಗೆ ಸಮಿತಿಯಲ್ಲಿ ಜಾಗ ನೀಡಲಾಗಿಲ್ಲ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಇದೀಗ ಸ್ಟೀರಿಂಗ್ ಸಮಿತಿ ಆ ಜಾಗವನ್ನು ತೆಗೆದುಕೊಳ್ಳಲಿದ್ದು, ಗಾಂಧಿ ಕುಟುಂಬದ ನಿಷ್ಠಾವಂತರು ಇದರ ಸದಸ್ಯರಾಗಿದ್ದು, ಅದಾಗಲೇ ಇವರೆಲ್ಲ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದು ಹೊಸ ಜವಾಬ್ದಾರಿಗೆ ಸಜ್ಜಾಗಿದ್ದಾರೆ.
ನೂತನ ಸಿಡಬ್ಲ್ಯುಸಿಯನ್ನು ಖರ್ಗೆ ಅವರು ಕಾಂಗ್ರೆಸ್ ಪೂರ್ಣ ಪ್ರಮಾಣದ ಅಧಿವೇಶನದ ನಂತರ ಮರುರಚಿಸಲಿದ್ದಾರೆ. ಅಧಿವೇಶನವು ಮುಂದಿನ ವರ್ಷ ಮಾರ್ಚ್-ಎಪ್ರಿಲ್ ನಲ್ಲಿ ನಡೆಯಲಿದೆ.