ನವದೆಹಲಿ: ಕಳೆದ 3 ದಿನಗಳಿಂದ ವಿಚಾರಣೆ ಎದುರಿಸಿ 4ನೇ ದಿನದಂದು ಮಾಜಿ ಸಚಿವ, ಕನಕಪುರ ಕ್ಷೇತ್ರದ ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಮೂರು ದಿನಗಳಿಂದ ಇಡಿ ವಿಚಾರಣೆ ಎದುರಿಸಿರುವ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ 4ನೇ ದಿನವೂ ಸಹ ವಿಚಾರಣೆಗೆ ಬರುವಂತೆ ಸೋಮವಾರ ಸೂಚನೆ ನೀಡಿತ್ತು. ಮಂಗಳವಾರ ವಿಚಾರಣೆಗೆ ಡಿಕೆ ಶಿವಕುಮಾರ್ ಅವರು ನವದೆಹಲಿಯಲ್ಲಿರುವ ಇಡಿ ಕಚೇರಿ ತೆರಳಿದ್ದರು. ಸಂಜೆಯವರೆಗೂ ವಿಚಾರಣೆ ನಡೆಸಿದ ಡಿಕೆಶಿ ಅಧಿಕಾರಿಗಳು, ರಾತ್ರಿ ಬಂಧಿಸಿದ್ದಾರೆ.
8.59 ಕೋಟಿ ರೂ. ದಾಖಲೆ ಇಲ್ಲದ ಹಣ ಪತ್ತೆ ಸಂಬಂಧಪಟ್ಟಂತೆ ಇಡಿ ನೀಡಿದ್ದ ಸಮನ್ಸ್ ಮೇರೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದ ಡಿಕೆಶಿ, ಕಳೆದು 3 ದಿನಗಳಿಂದ ಇ.ಡಿ. ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿದ್ದರು.












