ಮಾಜಿ ‘ಪವರ್’ ಫುಲ್ ಮಿನಿಸ್ಟರ್, ರಾಜ್ಯದ ಪ್ರಭಾವಿ ರಾಜಕಾರಣಿ ಡಿಕೆಶಿ‌ ಬಂಧನ

ನವದೆಹಲಿ: ಕಳೆದ 3 ದಿನಗಳಿಂದ ವಿಚಾರಣೆ ಎದುರಿಸಿ 4ನೇ ದಿನದಂದು ಮಾಜಿ ಸಚಿವ, ಕನಕಪುರ ಕ್ಷೇತ್ರದ ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮೂರು ದಿನಗಳಿಂದ ಇಡಿ ವಿಚಾರಣೆ ಎದುರಿಸಿರುವ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ 4ನೇ ದಿನವೂ ಸಹ ವಿಚಾರಣೆಗೆ ಬರುವಂತೆ ಸೋಮವಾರ ಸೂಚನೆ ನೀಡಿತ್ತು. ಮಂಗಳವಾರ ವಿಚಾರಣೆಗೆ ಡಿಕೆ ಶಿವಕುಮಾರ್ ಅವರು ನವದೆಹಲಿಯಲ್ಲಿರುವ ಇಡಿ ಕಚೇರಿ ತೆರಳಿದ್ದರು. ಸಂಜೆಯವರೆಗೂ‌ ವಿಚಾರಣೆ ನಡೆಸಿದ ಡಿಕೆಶಿ ಅಧಿಕಾರಿಗಳು, ರಾತ್ರಿ ಬಂಧಿಸಿದ್ದಾರೆ. […]

ಉಡುಪಿ ಜಿಲ್ಲೆ: ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್ ಇಲ್ಲಿದೆ ನೋಡಿ

ಉಡುಪಿ:2019-20 ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕøತವಾದ ಶಿಕ್ಷಕರ ವಿವರ ಹೀಗಿದೆ. ಪ್ರೌಢಶಾಲಾ ಶಿಕ್ಷಕರು: ಕೆ.ದಿನಮಣಿ ಶಾಸ್ತ್ರೀ ಚಿತ್ರಕಲಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬ್ರಹ್ಮಾವರ( ಬ್ರಹ್ಮಾವರ ವಲಯ), ವೆಂಕಟರಮಣ ಉಪಾಧ್ಯಾಯ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ವಳಕಾಡು( ಉಡುಪಿ ವಲಯ), ರಾಜಶೇಖರ ಎಂ. ತಾಳಿಕೋಟೆ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಆಲೂರು( ಬೈಂದೂರು ವಲಯ), ಶ್ರೀಕಾಂತ್ ವಿ. ಸಹ […]

ಉಡುಪಿ: ದೆಂದೂರ್ ಕಟ್ಟೆ‌ ಗಣೇಶೋತ್ಸವಕ್ಕೆ ಆಗಮಿಸಿದ ಮೋದಿ…!

ಉಡುಪಿ: ಸಾಲು ಸಾಲಾಗಿ ಕೆಂಪುದೀಪದ ಕಾರುಗಳು. ಝೆಡ್ ಪ್ಲಸ್ ಭದ್ರತೆ, ರಸ್ತೆ ಸಂಚಾರ ಬಂದ್….!  ಹೀಗೆ ದೆಂದೂರುಕಟ್ಟೆ ಬಳಿ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾರ್ವಜನಿಕರು ಏನಾಗುತ್ತಿದೆ ಎಂದು ಅಚ್ಚರಿಯಿಂದ‌ ವೀಕ್ಷಿಸುತ್ತಿರುವಾಗಲೇ ನರೇಂದ್ರ ಮೋದಿ ಅವರು ಕಾರಿನಿಂದ ಇಳಿದಿದ್ದಾರೆ. ದೆಂದೂರ್‌ಕಟ್ಟೆಯಲ್ಲಿ ಸೋಮವಾರ ಆಯೋಜಿಸಿದ ಗಣೇಶೋತ್ಸವ ಸಮಾರಂಭದಲ್ಲಿ ಹೀಗೆ ಮೋದಿ‌ ಪ್ರತ್ಯಕ್ಷವಾಗಿದ್ದಾರೆ. ಅಸಲಿಗೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿಯಲ್ಲ, ಮೋದಿಯವರನ್ನೇ ಹೋಲುವ ವೇಷಧಾರಿ ಹಿರಿಯಡ್ಕದ ಸದಾನಂದ ನಾಯಕ್. ಕಾರಿನಿಂದ ಕೆಳಗಿಳಿದ ಈ ಮೋದಿ ವೇಷಧಾರಿ ಸದಾನಂದ ನಾಯಕ್ […]

ಮುಜರಾಯಿ ದೇಗುಲಗಳ ಅಭಿವೃದ್ಧಿ: ಡಿ.ಸಿ. ಅಧಿಕಾರ 1 ಕೋಟಿ ರೂ. ಗೆ – ಸಚಿವ ಕೋಟ

ಉಡುಪಿ: ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳಿಗೆ ರೂ. 1 ಕೋಟಿ ವರೆಗೆ ಮಂಜೂರಾತಿ ಅಧಿಕಾರ ನೀಡುವ ಪ್ರಸ್ತಾವನೆ ರಾಜ್ಯ ಸರಕಾರದ ಮುಂದೆ ಇದೆ ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಮಂಗಳವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ವಿವಿಧ ಕಾಮಗಾರಿ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇಗುಲಗಳಲ್ಲಿ ಪ್ರಸಕ್ತ ರೂ. […]

ಜೆಡಿಎಸ್ ಸದಸ್ಯತ್ವಕ್ಕೆ ಪ್ರಮೋದ್ ಮಧ್ವರಾಜ್ ಗುಡ್ ಬೈ

ಉಡುಪಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸದಸ್ಯತ್ವಕ್ಕೆ ಮಂಗಳವಾರ  ರಾಜೀನಾಮೆ ನೀಡಿದ್ದಾರೆ. ಪ್ರಮೋದ್ ಮಧ್ವರಾಜ್ ಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಕಾಂಕ್ಷೆಯಿತ್ತು. ಆದರೆ, ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ  ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಇದೀಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಲ್ಲದ ಕಾರಣ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ   ಮಾಜಿ ಸಚಿವ ಪ್ರಮೋದ್ ಮಧ್ವರಾಜ್  ಕಾರಣ ನೀಡಿದ್ದಾರೆ.