ಕಾಂಗ್ರೆಸ್-ಜೆಡಿಎಸ್ ಚಿಹ್ನೆಯ ಶಾಲು ಧರಿಸಿ ಗಮನ ಸೆಳೆದ ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್-ಜೆಡಿಎಸ್ಚಿ ಹ್ನೆಯುಳ್ಳ ಶಾಲು ಧರಿಸಿ ಗಮನ ಸೆಳೆದರು.
ಶುಕ್ರವಾರ ಜೆಡಿಎಸ್ ಬಿ ಫಾರಂ ಪಡೆದುಕೊಂಡು ತವರಿಗೆ ಆಗಮಿಸಿದ ಅವರು ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.
ಒಂದೇ ಶಾಲಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡು ಪಕ್ಷದ ಚಿಹ್ನೆ ಮುದ್ರಿಸಿಕೊಂಡಿರುವರುವ ಪ್ರಮೋದ್,  ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು 18 ರ ವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾಯ್ತು ಎಂದು ನಗೆ ಚಟಾಕಿ ಹಾರಿಸಿದರು.